

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಮಹಿಳಾ ಕುಶಲಕರ್ವಿುಗಳು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆದು ಸ್ವಂತ ಉದ್ಯಮ ಆರಂಭಿಸಬೇಕು ಎಂದು ಧಾರವಾಡ ಕರಕುಶಲ ಸೇವಾ ಕೇಂದ್ರದ ಸಹಾಯಕ ನಿರ್ದೇಶಕಿ ದರ್ಶನಾ ರಾಘವ ಹೇಳಿದರು.
ರ್ಯಾಪಿಡ್ ಸಂಸ್ಥೆಯ ಸಹಯೋಗದೊಂದಿಗೆ ಹುಬ್ಬಳ್ಳಿ-ಧಾರವಾಡ ಲಘು ಉದ್ಯೋಗ ಭಾರತಿ ಧಾರವಾಡದಲ್ಲಿ ಬುಧವಾರ ಆಯೋಜಿಸಿದ್ದ ಕುಶಲಕರ್ವಿು ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧಾರವಾಡ ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಶಿವರಾಜ ಅಳ್ಳಿಮಟ್ಟಿ ಮಾತನಾಡಿ, ಬ್ಯಾಂಕ್ನಿಂದ ಕುಶಲಕರ್ವಿುಗಳ ಒಳಿತಿಗಾಗಿ ಇರುವ ಯೋಜನೆಗಳನ್ನು ವಿವರಿಸಿದರು. ಲಘು ಉದ್ಯೋಗ ಭಾರತಿ ಹು-ಧಾ ಅಧ್ಯಕ್ಷ ಎಸ್.ಸಿ. ಪಾಟೀಲ, ಇ-ಕಾಮರ್ಸ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕುಶಲಕರ್ವಿುಗಳಿಗೆ ಇರುವ ಅವಕಾಶಗಳನ್ನು ತಿಳಿಸಿ, ತಮ್ಮೊಂದಿಗೆ ಗ್ರಾಮ ಶಿಲ್ಪಿ ಪ್ರದರ್ಶನ ಏರ್ಪಡಿಸಲು ಮುಂದೆ ಬನ್ನಿ ಎಂದು ಕರೆ ನೀಡಿದರು.
ಲಘು ಉದ್ಯೋಗ ಭಾರತಿ ಕರ್ನಾಟಕ ಕಾರ್ಯದರ್ಶಿ ಹೇಮಾ ಬೆಂತೂರ, ಹು-ಧಾ ಕಾರ್ಯದರ್ಶಿ ಪ್ರಸಾದ ಪಾವಟೆ, ರ್ಯಾಪಿಡ್ ಸಂಸ್ಥೆ ಕಾರ್ಯದರ್ಶಿ ವನಶ್ರೀ ಪುರೋಹಿತ, ಇದ್ದರು. 46 ಕುಶಲಕರ್ವಿು ಕಾರ್ಡ್ಗಳನ್ನು ವಿತರಿಸಲಾಯಿತು.