

ವಾಡಿ: ಸರ್ಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಉದ್ಯೋಗ ಮತ್ತು ಆರ್ಥಿಕತೆಗೆ ಪೂರಕವಾಗುವ ನಿಟ್ಟಿನಲ್ಲಿ ಎಲ್ಲರೂ ಆಲೋಚನೆ ಮಾಡಬೇಕು ಎಂದು ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಸಾತಯ್ಯ ಹಿರೇಮಠ ಹೇಳಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಗುರುವಾರ ಆಯೋಜಿಸಿದ ಬೀದಿಬದಿ ವ್ಯಾಪಾರಿಗಳ ಮೇಲ್ವಿಚಾರಣೆ ಹಾಗೂ ಕೋವಿಡ್-19 ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆತ್ಮ ನಿರ್ಭರ್ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ವಿಶೇಷ ಕಿರುಸಾಲ ನೀಡಲಾಗುವುದು. ಎಲ್ಲ ನೋಂದಾಯಿತ ವ್ಯಾಪಾರಿಗಳು ಆರಂಭಿಕವಾಗಿ 10 ಸಾವಿರ ಕಿರು ಸಾಲ ಪಡೆಯಬಹುದು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ವಿಠ್ಠಲ್ ಹಾದಿಮನಿ ಮಾತನಾಡಿ, ಆರಂಭದಲ್ಲಿ ಶೇ.7.5 ಬಡ್ಡಿದರದೊಂದಿಗೆ 10 ಸಾವಿರ ಸಾಲ ನೀಡಲಾಗುವುದು. ಸಮಯಕ್ಕೆ ಸರಿಯಾದ ಸಾಲ ಮರು ಪಾವತಿಸಿದರೆ 1200 ರೂ. ಸಬ್ಸಿಡಿ ದೊರೆಯಲಿದೆ. ಪುರಸಭೆ ವ್ಯಾಪ್ತಿಯಲ್ಲಿ 298 ನೋಂದಾಯಿತ ಬೀದಿ ಬದಿ ವ್ಯಾಪಾರಿಗಳಿದ್ದು, 130 ಅಜರ್ಿಗಳು ಬಂದಿವೆ ಎಂದರು.
ಕೌಶಲ ಅಭಿವೃದ್ಧಿ ಇಲಾಖೆ ಜಿಲ್ಲಾ ಸಂಪನ್ಮೂಲ ಅಧಿಕಾರಿ ರಾಜಕುಮಾರ್ ಗುತ್ತೇದಾರ್, ಸಮುದಾಯ ಸಮನ್ವಯಾಧಿಕಾರಿ ಚಂದ್ರಕಾಂತ ಪಾಟೀಲ್, ಎಬಿಐನ ವ್ಯವಸ್ಥಾಪಕ ಅಭಿನವ ಮಾತನಾಡಿದರು.
ಪುರಸಭೆ ಸಮುದಾಯ ಸಂಘಟಕ ಕಾಶೀನಾಥ ಧನ್ನಿ, ಎಚ್ಡಿಎಪ್ಸಿ ಬ್ಯಾಂಕ್ ವ್ಯವಸ್ಥಾಪಕ ಸಂತೋಷ, ಬೀದಿ ಬದಿ ವ್ಯಾಪಾರಿಗಳ ಚುನಾಯಿತ ಪ್ರತಿನಿಧಿಗಳಾದ ವಾಸೀಂ ಅಕ್ರಂ, ಅಬ್ದುಲ್ ರೆಹಮಾನ್ ಖಾನ್, ಶ್ರಾವಣ ಬಟ್ಟಕರ್ಿ, ಚಂದ್ರಮ್ಮ ಹಳ್ಳಿಕರ್ ಇದ್ದರು.