ಸರ್ಕಾರದ ಯೋಜನೆ ಜನರ ಮನೆ ಬಾಗಿಲಿಗೆ

nagmarpalli
Published on

ಬೀದರ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರ ಮಾರ್ಗದರ್ಶನದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಪ್ರಕಟಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿ ಪುಸ್ತಕ ಕುರಿತು ಪಕ್ಷದ ರಾಜ್ಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಈ ಬುಕ್ ನೆರವಾಗಲಿದೆ ಎಂದು ಹೇಳಿದ್ದಾರೆ.

ನವ ಭಾರತಕ್ಕೆ ನವ ಯೋಜನೆಗಳು ಕೃತಿಯನ್ನು ಈಚೆಗೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ನರೇಂದ್ರ ಮೋದಿ ಸರ್ಕಾರದ ಜನಪರ ಯೋಜನೆಗಳ ಮಾಹಿತಿಯನ್ನು ಪ್ರತಿ ಮನೆಗೆ ತಲುಪಿಸಲು ಅನುಕೂಲವಾಗುವಂತೆ ಪುಸ್ತಕ ಸಿದ್ಧಪಡಿಸಲಾಗಿದೆ. ಪ್ರಧಾನಮಂತ್ರಿ ಫಸಲ್ ಬಿಮಾ, ಉಜ್ವಲಾ, ಉಜಾಲ, ಮುದ್ರಾ, ಸ್ಕಿಲ್ ಇಂಡಿಯಾ, ಪಿಎಂ ಗರೀಬ್ ಕಲ್ಯಾಣ್,  ಸ್ವಚ್ಚ ಭಾರತ್, ಮೇಕ್ ಇನ್ ಇಂಡಿಯಾ, ಸುರಕ್ಷಿತ ಮಾತೃತ್ವ, ಡಿಜಿಟಲ್ ಇಂಡಿಯಾ, ಸುಕನ್ಯಾ ಸಮೃದ್ಧಿ, ರಾಷ್ಟ್ರೀಯ ವಯೋಶ್ರೀ, ಪ್ರಧಾನಮಂತ್ರಿ ಕೌಶಲ ಕೇಂದ್ರ, ಕೃಷಿ ಕಲ್ಯಾಣ ಅಭಿಯಾನ, ಮಣ್ಣಿನ ಆರೋಗ್ಯ ಕಾಡ್೯ ಮೊದಲಾದ ಯೋಜನೆಗಳ ಮಾಹಿತಿ ಈ ಬುಕ್ನಲ್ಲಿದೆ. ಕ್ಯೂ ಆರ್ ಕೋಡ್ ಬಳಸಿ ಆಯಾ ಯೋಜನೆಗಳಿಗೆ ಸಂಬಂಸಿದ ವೆಬ್ ಸೈಟ್ ನಲ್ಲಿ ಅರ್ಜಿಯನ್ನೂ ಸಲ್ಲಿಸಬಹುದು ಎಂದು ನಾಗಮಾರಪಳ್ಳಿ ತಿಳಿಸಿದ್ದಾರೆ.

ಬೀದರ್ ಉತ್ತರ ವಿಧಾನಸಭೆ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಈಗಾಗಲೇ ಸರ್ಕಾರದ ಯೋಜನೆಗಳ ಲಾಭವನ್ನು ಜನರ ಮನೆ ಬಾಗಿಲಿಗೆ ತಲಭಾಗವಹಿಸಲಿದೆ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ಮೂಲಕ ನಡೆಯುತ್ತಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗಿದೆ. ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net