

ಕಾಳಗಿ: ಪ್ರತಿಯೊಬ್ಬರೂ ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪನೆ ಮಾಡುವುದರ ಜತೆಗೆ ಸರ್ಕಾರದ ಮಾರ್ಗಸೂಚಿಯಂತೆ ಹಬ್ಬ ಆಚರಣೆ ಮಾಡಬೇಕು ಎಂದು ತಹಸೀಲ್ದಾರ್ ಘಮಾವತಿ ರಾಠೋಡ್ ಸೂಚನೆ ನೀಡಿದರು.
ಪ್ರವಾಸಿ ಮಂದಿರದಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೆ.7ರಂದು ಗಣೇಶ ಚತುರ್ಥಿ ಹಾಗೂ ಸೆ.16ರಂದು ಈದ್ ಮಿಲಾದ್ ಹಬ್ಬವನ್ನು ಪಟ್ಟಣ ಸೇರಿ ತಾಲೂಕಿನಾದ್ಯಂತ ಶಾಂತಿಯುತವಾಗಿ ಆಚರಣೆ ಮಾಡಬೇಕು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಗಣೇಶ ಪ್ರತಿಷ್ಠಾಪನೆಗೆ ವಿವಿಧ ಇಲಾಖೆಗಳಿಂದ ಪರವಾನಗಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದರು.
ಕಾಳಗಿ ಸಿಪಿಐ ಜಗದೇವಪ್ಪ ಪಾಳ ಮಾತನಾಡಿ, ಹಬ್ಬಗಳನ್ನು ಸಂಪ್ರದಾಯದAತೆ ಆಚರಿಸಬೇಕು. ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಪಿಒಪಿ ಗಣೇಶ ಮೂರ್ತಿ ಮಾರಾಟ ಕಂಡುಬAದಲ್ಲಿ ಸೀಜ್ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆಯಿಂದ ಯಾವುದೇ ಹೊಸ ನಿರ್ಬಂಧ ಹೇರುತ್ತಿಲ್ಲ. ಕಾನೂನು ಪಾಲನೆ ಅತ್ಯವಶ್ಯಕ. ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಡಿಜೆ ಬಳಕೆ ನಿಷೇಧಿಸಲಾಗಿದೆ. ಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಸೂಚನೆ ನೀಡಿದರು.
ಪಪಂ ಮುಖ್ಯಾಧಿಕಾರಿ ಪಂಕಜಾ ಎ. ಮಾತನಾಡಿ, ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಅಗತ್ಯ ವಿದ್ಯುತ್ ವ್ಯವಸ್ಥೆ ಮಾಡಲಾಗುವುದು. ರೌದ್ರಾವತಿ ನದಿಯ ನೂತನ ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಸ್ಥಳ ನಿಗದಿ ಮಾಡಲಾಗಿದೆ ಎಂದು ಹೇಳಿದರು. ಪಿಎಸ್‌ಐ ತಿಮ್ಮಯ್ಯ ಬಿ.ಕೆ., ಚಿತ್ತಾಪುರ ಅಗ್ನಿಶಾಮಕ ಠಾಣಾಧಿಕಾರಿ ನಾಗರಾಜ ಎ.ಎನ್., ನಿವೃತ್ತ ಶಿP್ಷÀಕ ಗುಡುಸಾಬ್ ಕಮಲಾಪುರ ಮಾತನಾಡಿದರು.
ಪ್ರಮುಖರಾದ ಶಿವಶರಣಪ್ಪ ಕಮಲಾಪುರ, ಜಗನ್ನಾಥ ಚಂದನಕೇರಿ, ಗೌರಿಶಂಕರ ಗುತ್ತೇದಾರ್, ದತ್ತು ಗುತ್ತೇದಾರ್, ಸಂತೋಷ ನರನಾಳ, ಶ್ರೀನಿವಾಸ ಗುರಮಠಕಲ್, ಈರಣ್ಣಗೌಡ ಟೆಂಗಳಿಕರ್, ಅನೀಲಕುಮಾರ ಗುತ್ತೇದಾರ್, ಇಬ್ರಾಹಿಂ ಶಾ, ದೀಲಿಪ್ ಭರತನೂರ, ಚಿತ್ರಶೇಖರ ದಂಡೋತಿಕರ್, ಮನೋಹರ ಜಾಧವ್ ಇತರರಿದ್ದರು.