

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಭರವಸೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ವಿನಂತಿ ಬಳಿಕ ಕೋಟೆನಗರಲ್ಲಿ ಕಳೆದ ೧೫ ದಿನಗಳಿಂದ ನಡೆಯುತ್ತಿದ್ದ ಕೃಷ್ಣಾ ಮೇಲ್ದಂಡೆ ಯೋಜನಾ ಬಾಽತ ಸಂತ್ರಸ್ತರ ಹೋರಾಟವು ಮಂಗಳವಾರ ರಾತ್ರಿ ಅಂತ್ಯಗೊ0ಡಿದೆ.
ಒ0ದೇ ಹಂತದಲ್ಲಿ ೫೨೪.೨೫೬ ಮೀಟರ್ ವರೆಗೆ ಭೂ ಸ್ವಾಽÃನ ಹಾಗೂ ಯೋಗ್ಯ ದರದಲ್ಲಿ ಭೂ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲಾಗುವುದು. ೩ ರಿಂದ ೪ ವರ್ಷದ ಅವಽಯೊಳಗೆ ಯೋಜನೆ ಅಂತಿಮಗೊಳಿಸುವ ಭರವಸೆ ಸರ್ಕಾರ ನೀಡಿದ್ದರಿಂದ ಹೋರಾಟಗಾರರು ಒಪ್ಪಿಗೆ ಸೂಚಿಸಿದರು. ಹೋರಾಟ ಸಮಿತಿ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ ಸಮಿತಿ ನಿರ್ಣಯಕ್ಕೆ ಬದ್ಧ ಇದ್ದವರು ಚಪ್ಪಾಳೆ ತಟ್ಟಿ ಎಂದಾಕ್ಷಣ ಸಭೆಯಲ್ಲಿ ಸೇರಿದ್ದ ಬಹುತೇಕರು ವಿರೋಧ ವ್ಯಕ್ತಪಡಿಸಿದೇ ಚಪ್ಪಾಳೆ ತಟ್ಟಿ ಸೂಚನೆ ವ್ಯಕ್ತಪಡಿಸದೆ.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ವಿಜಯಪುರ-ಬಾಗಲಕೋಟೆ ಸಂತ್ರಸ್ತರು ತ್ಯಾಗ ಜೀವಿಗಳು ಕಳೆದ ಮೂವತ್ತು ಹೋರಾಟದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ. ತಮ್ಮ ಮೌನ, ಶಾಂತಿಯುತ ಪ್ರತಿಭಟನೆ ಮೂಲಕ ಮಾದರಿಯಾಗಿದ್ದಾರೆ. ಸರ್ಕಾರ ಕಿವಿ ಹಿಂಡು ಕೆಲಸ ಮಾಡಿದ್ದಾರೆ. ಈ ಹಿಂದೆ ಎಸ್.ಎಂ.ಕೃಷ್ಣಾ ಸರ್ಕಾರ ಅವಽಯಲ್ಲಿ ನೀರು ಸಂದರ್ಭದಲ್ಲಿ ನಾನು ಸಚಿವನಾಗಿದ್ದೆ. ಅಂದು ಕೂಡಾ ಸಂದಿಗ್ಧ ಪರಿಸ್ಥಿತಿ ಇತ್ತು. ಹೋರಾಟವು ಬಲಗೊಂಡಿತ್ತು. ಸರ್ಕಾರದ ಸಚಿವ ಸಂಪುಟವೇ ಬಾಗಲಕೋಟೆಗೆ ಬಂದಿತ್ತು. ನಂತರದಲ್ಲಿ ಪರಿಸ್ಥಿತಿ ತಿಳಿಯಾಯಿತು. ೬೩೮ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿ ನೀರು ನಿಲ್ಲಿಸಲಾಯಿತು ಎಂದರು.
ಈಗಲು ನಾನು ಮಂತ್ರಿಯಾಗಿದ್ದೇನೆ. ಸಂತ್ರಸ್ತನು ಹೌದು, ಜನಪ್ರತಿನಿಽ, ಸರ್ಕಾರದ ಪ್ರತಿನಿಽಯು ಹೌದು. ಮತ್ತೊಮ್ಮೆ ಹೋರಾಟ ಯಶಸ್ವಿಯಾಗಿ ಪೂರ್ಣಗೊಂಡಿದೆ. ವ್ಯಕ್ತಿರಿಕ್ತ ಪರಿಣಾಮ ಕಂಡು ಬಂದಿಲ್ಲ. ೫೨೪ ಮೀಟರ್ ವರೆಗೆ ಪೂರ್ಣ ಪ್ರಮಾಣದಲ್ಲಿ ಮುಳಗಡೆ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ೪ ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳುವ ಭರವಸೆ ಇದೆ. ರೈತರಿಗೂ ತೊಂದರೆಯಾಗದAತೆ ಸರ್ಕಾರಕ್ಕೂ ಹೊರೆಯಾಗದಂತೆ ಬೆಲೆ ಮಾಡಲಾಗುವುದು. ಸಚಿವ ಸಂಪುಟ ಸಭೆ ಬಳಿಕ ಉಳಿದ ತೀರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಡಾ.ಶೇಖರ ಮಾನೆ, ಅಶೋಕ ಲಾಗಲೂಟಿ, ಚಂದ್ರಶೇಖರ ರಾಠೋಡ, ಶಶಿಕಾಂತಗೌಡ ಪಾಟೀಲ ಇತರರು ಇದ್ದರು.