

ಹೊಳೆನರಸೀಪುರ: ಕರೊನಾ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಬಕ್ರೀದ್ ಆಚರಣೆ ಮಾಡುವಂತೆ ಡಿವೈಎಸ್ಪಿ ಲಕ್ಷ್ಮೇಗೌಡ ಸೂಚಿಸಿದರು.
ಪಟ್ಟಣದ ನಗರ ಪೊಲೀಸ್ ಠಾಣೆ ಆವರಣದಲ್ಲಿ ಬಕ್ರೀದ್ ಆಚರಣೆ ಹಿನ್ನೆಲೆ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿಯಲ್ಲಿ ಅವರು ಮಾತನಾಡಿದರು. ಕರೊನಾ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಈದ್ಗ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಿದೆ. ಮಸೀದಿಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಪರಸ್ಪರ ಅಂತರ ಕಾಪಾಡಿಕೊಂಡು ಪ್ರಾರ್ಥನೆ ಮಾಡಬೇಕು. ಒಮ್ಮೆ 50 ಜನರು ಮೀರದಂತೆ ಸಮೂಹಿಕ ಪ್ರಾರ್ಥನೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ವೃತ್ತ ನಿರೀಕ್ಷಕ ಅಶೋಕ್, ಪಿಎಸ್‌ಐ ಕುಮಾರ್, ನಗರ ಠಾಣೆ ಕ್ರೈಂ ಪಿಎಸ್‌ಐ ಪ್ರಮೋದ್, ಗ್ರಾಮಾಂತರ ಠಾಣೆ ಪಿಎಸ್‌ಐ ಮೋಹನ ಕೃಷ್ಣ, ಮೌಲಾನಗಳಾದ ಅಬ್ದುಲ್ ವಹಿಬ್, ಮಹಮದ್ ಆರಿಫ್ ಹಾಗೂ ಅಬ್ದುಲ್ ವಾಹಬ್ ಅಶ್ರಫಿ, ಇಲಿಯಾಜ್, ಮುಕ್ತಾರ್ ಸಾಬ್ ಇತರರು ಇದ್ದರು.