ಸರ್ಕಾರದ ನಿಯಮಗಳನ್ನು ಪಾಲಿಸಿ ಕೆಲಸ ಮಾಡಿ

18 5 SBD 1
Published on

ಶಹಾಬಾದ್: ಕ್ಷೌರಿಕ ಸಮುದಾಯದವರು ಕಳೆದ 2 ತಿಂಗಳಿಂದ ತಮ್ಮ ಅಂಗಡಿಗಳನ್ನು ಮುಚ್ಚಿ ಕರೊನಾ ನಿಯಂತ್ರಿಸುವಲ್ಲಿ ಸರ್ಕಾರಕ್ಕೆ ಸಹಕಾರ ನೀಡಿದ್ದೀರಿ. ಮುಂದಿನ ದಿನಗಳಲ್ಲೂ ಇದೇ ರೀತಿಯ ಸಹಕಾರವಿರಲಿ ಎಂದು ಶಾಸಕ ಬಸವರಾಜ ಮತ್ತಿಮೂಡ ಕೋರಿದರು.
ಪಟ್ಟಣದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಡಪದ ಸಮಾಜದ 58 ಹಾಗೂ ಸವಿತಾ ಸಮಾಜದ 105 ಕುಟುಂಬಕ್ಕೆ ಸಕರ್ಾರದಿಂದ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಸಕರ್ಾರ ಲಾಕ್ಡೌನ್ ಸಡಿಲಗೊಳಿಸಿದ್ದು, ಸಲೂನ್ಗಳನ್ನು ಆರಂಭಸುವಂತೆ ಸೂಚನೆ ನೀಡಿದೆ. ಹೀಗಾಗಿ ಸರ್ಕಾರದ ನಿಯಮ ಪಾಲಿಸಿ ಕೆಲಸ ನಿರ್ವಹಿಸುವಂತೆ ಮನವಿ ಮಾಡಿದರು.
ತಹಸೀಲ್ದಾರ್ ಸುರೇಶ ವಮಾ , ನೋಡಲ್ ಅಧಿಕಾರಿ ನೀಲಗಂಗಾ ಬಬಲಾದ, ಪೌರಾಯುಕ್ತ ವೆಂಕಟೇಶ, ಪಿಎಸ್ಐ ಮಹಾಂತೇಶ ಪಾಟೀಲ್, ಮುಖಂಡರಾದ ಅಣವೀರ ಇಂಗಿನಶೆಟ್ಟಿ, ನಿಂಗಣ್ಣ ಹುಳಗೋಳ, ನಾಗರಾಜ ಮೇಲಗಿರಿ, ನಾಗರಾಜ ಮೇಲಗಿರಿ, ಶ್ರೀಧರ ಜೋಶಿ, ಭೀಮಯ್ಯ ಗುತ್ತೇದಾರ್, ಸಂಜಯ ಸೂಡಿ, ವೀರೇಶ ಬಂದಳ್ಳಿ, ಕನಕಪ್ಪ ದಂಡಗುಲಕರ್, ಜ್ಯೋತಿ ಶಮರ್ಾ, ಭಾಗಿರತಿ ಗುನ್ನಾಪೂರ, ಜಯಶ್ರೀ ಸೂಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net