

ಚಿಕ್ಕಮಗಳೂರು: ಜನಪರವಾದ ಆಡಳಿತದ ಮೂಲಕ ಜನರ ಮನೆಬಾಗಿಲಿಗೆ ಸರ್ಕಾರದ ಯೋಜನೆಗಳ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ತಾಲೂಕಿನ ಹಿರೇಕೊಳಲೆ ಗ್ರಾಪಂ ವ್ಯಾಪ್ತಿಯ ಹೊಸಪುರ ಹಾಗೂ ಅಕ್ಕಪಕ್ಕದ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ವಾಸಿಸುವವನೇ ಮನೆ ಒಡೆಯ ಯೋಜನೆಯಡಿ ಹಕ್ಕುಪತ್ರ, ಇ-ಸ್ವತು ವಿತರಿಸಿ ಮಾತನಾಡಿದರು.
ರಾಜ್ಯದಲ್ಲಿ ಈಗಾಗಲೇ ಈ ಯೋಜನೆಯಡಿ ೪ ಲಕ್ಷಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣಭೈರೇಗೌಡ ಈ ಯೋಜನೆಗೆ ಚಾಲನೆ ನೀಡಿದ್ದು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ೩೫೦ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಒಟ್ಟು ೨,೮೦೦ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಗುರಿಹೊಂದಲಾಗಿದೆ ಎಂದರು.
೧೯೭೭-೭೮ರಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ್ ಅರಸ್ ಅವರ ಅವಧಿಯಲ್ಲಿ ಉಳುವವನೇ ಭೂ ಒಡೆಯ ಎಂಬ ಕಾನೂನು ಜಾರಿಗೆ ತರಲಾಗಿತ್ತು. ಈ ಮೂಲಕ ಹಲವರಿಗೆ ಭೂಮಿ ಲಭಿಸಿತು ಎಂದು ಹೇಳಿದರು.
ಜಾತಿ, ಪಕ್ಷ, ಧರ್ಮ ನೋಡದೆ ಈ ಯೋಜನೆಯನ್ನು ಜಾರಿಮಾಡಿ ಇಂದಿರಾ ಗಾಂಧಿ ಅವರು ೨೦ ಅಂಶಗಳ ಕಾರ್ಯಕ್ರಮಗಳ ಮೂಲಕ ದೇಶದ ದೀನದಲಿತರ, ಬಡವರ ಏಳಿಗೆಗಾಗಿ ಇಂತಹ ಜನಪರವಾದ ಯೋಜನೆಗಳನ್ನು ರೂಪಿಸಿದ್ದರು ಎಂದು ಸ್ಮರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷಿ ಕುಟುಂಬ, ರೈತ ಕಾರ್ಮಿಕ, ಮಧ್ಯಮ ವರ್ಗದವರ ಸಾಮಾನ್ಯ ಜನರ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಅದಕ್ಕೆ ಪೂರಕವಾಗಿ ನಿಮ್ಮ ಪ್ರತಿನಿಧಿಯಾಗಿz್ದೆÃನೆ. ಬಡಜನರ ಕಷ್ಟ ಅರಿತು ಮುಖ್ಯಮಂತ್ರಿಗಳು ೫ ಗ್ಯಾರಂಟಿ ಯೋಜನೆಗಳ ಮೂಲಕ ಜನರನ್ನು ಆರ್ಥಿಕ ಸದೃಢರನ್ನಾಗಿಸಿಲು ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ನಾಡು-ನುಡಿ, ನೆಲ-ಜಲ ಮುಂತಾದವುಗಳಿಗೆ ಮೊದಲ ಆದ್ಯತೆ ನೀಡುವುದರ ಮೂಲಕ ದೇಶಪ್ರೇಮಿಗಳಾಗಿ ಹಂತ ಹಂತವಾಗಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಕ್ಷೇತ್ರದ ೩೪ ಗ್ರಾಮ ಪಂಚಾಯಿತಿಗಳಲ್ಲಿ ತಲಾ ೬೦ ಲಕ್ಷ ರೂ. ನೀಡುವ ಮೂಲಕ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ನಾರುಕಂತೆ ಮಠದ ರಸ್ತೆಗೆ ೫೦ ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರೇಕೊಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾಸುನಿಲ್, ತಾಲೂಕು ಪಂಚಾಯಿತಿ ಇಓ ವಿಜಯ್‌ಕುಮಾರ್, ತಹಸೀಲ್ದಾರ್ ಕಚೇರಿಯ ಪ್ರಸನ್ನ, ಸಂತೋಷ್, ಪ್ರಮುಖರಾದ ಎಚ್.ಪಿ.ಮಂಜೇಗೌಡ, ಜಯರಾಜ್ ಅರಸ್, ಪ್ರವೀu ïಬೆಟ್ಟಗೆರೆ ಯಶ್ವಂತ್, ಶಿವಕುಮಾರ, ರವಿ,. ಸುರೇಶ, ಪ್ರಸನ್ನ, ಕೇಶವ, ಚಂದ್ರಮೌಳಿ ಮತ್ತಿತರರು ಉಪಸ್ಥಿತರಿದ್ದರು.