ಸರ್ಕಾರದ ಆದೇಶ ವಿರೋಧಿಸಿ ಡಿ.1ರಂದು ಬೆಂಗಳೂರಲ್ಲಿ ಪ್ರತಿಭಟನೆ

CTD 29 001
Published on

ಚಿತ್ರದುರ್ಗ: ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಜಿಪಂ ಅಧೀನಕ್ಕೆ ಒಳಪಡಿಸಿರುವ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಡಿಸೆಂಬರ್ 1ರಂ ದು ಬೆಂಗಳೂರಿನ ಸ್ವಾತಂತ್ರ್ಯಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ರಾಜ್ಯಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ, ಉಪನ್ಯಾ ಸಕರ ಹಾಗೂ ಬೋಧಕೇತರ ಒಕ್ಕೂಟ ನಿರ್ಧರಿಸಿದೆ.
ಬಾಲಕರ ಸರ್ಕಾರಿ ಪಪೂ ಕಾಲೇಜಿನಲ್ಲಿ ಬುಧವಾರ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಮಾತಾನಾಡಿದ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್.ಮಲ್ಲೇಶ್, ಚಿತ್ರದುರ್ಗ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪಪೂ ಕಾಲೇಜುಗಳ ಪ್ರಾ ಚಾರ್ಯರು, ಉಪನ್ಯಾಸಕರು ಹಾಗೂ ಬೋಧಕೇತರ ನೌಕರರು ಸ್ವಯಂ ಪ್ರೇರಿತರಾಗಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಭಾಗವಹಿಸುವಂಥವರು ತಾಲೂಕು ಸಂಘದ ಅಧ್ಯಕ್ಷರಲ್ಲಿ ಹೆಸರು ನೋಂದಾಯಿಸುವಂತೆ ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಎಲ್.ರಂಗಪ್ಪ ತಿಳಿಸಿದರು. ಪ್ರಾಚಾರ್ಯರ ಸಂಘದ ನಿಕಟ ಪೂರ್ವ ಅಧ್ಯಕ್ಷ ಕೆ.ನಾಗಣ್ಣ ಹಾಗೂ ಉಪನ್ಯಾಸಕರ ಸಂಘದ ಕಾ ರ‌್ಯಾಧ್ಯಕ್ಷ ಜಿ.ಎಸ್.ತಿಪ್ಪೇಸ್ವಾಮಿ, ಬೋಧಕೇತರ ಸಂಘದ ಜಿಲ್ಲಾಧ್ಯಕ್ಷ ಟಿ.ದುರುಗೇಶಪ್ಪ, ಪಿ.ಕಾಂತರಾಜ್, ಆರ್.ಚಂದ್ರಶೇಖರ್, ಟಿ.ಎಂ. ಬಸವಯ್ಯ, ಡಿ.ಶ್ರೀನಿವಾಸ್, ಪಿ.ಎಂ.ಜಿ.ರಾಜೇಶ್,ಹೆಚ್.ಬಿ. ಬಸವರಾಜ್, ಎಂ.ಜೈಶ್ರೀನಿವಾಸ್, ಎ.ನಾಗರಾಜ್, ವಿ.ಚನ್ನಬಸಪ್ಪ, ಒ.ನಾ ಗರಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net