ಸರ್ಕಾರಕ್ಕೆ ಶ್ರೀರಾಮ ಸೇನೆ ಸವಾಲ್

Screenshot_20220719-182554_WhatsApp
Published on

ಬಾಗಲಕೋಟೆ: ತ್ರಿಶೂಲ ದಿಕ್ಷಾ ಕಾರ್ಯಕ್ರಮ ಮಾಡುತ್ತೇವೆ. ಧಮ್ ಇದ್ರೆ ತಡೆಯಿರಿ ಎಂದು ಶ್ರೀರಾಮ ಸೇನೆ ಬಳ್ಳಾರಿ ವಿಭಾಗೀಯ ಅಧ್ಯಕ್ಷ ಸಂಜೀವ ಮರಡಿ ಸರ್ಕಾರಕ್ಕೆ ಸವಾಲ ಹಾಕಿದ್ದಾರೆ.

ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಕೆರೂರು ಪಟ್ಟಣದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಗಾಯಗೊಂಡು ದಾಖಲಾಗಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿ ಮಂಗಳವಾರ ಮಾತನಾಡಿದ ಅವರು, ತ್ರಿಶೂಲ ದೀಕ್ಷಾ ಕಾರ್ಯಕ್ರಮ ಮತ್ತೆ ಪ್ರಾರಂಭ ಮಾಡುತ್ತೇವೆ. ಸರ್ಕಾರ ಹಾಗೂ ಪೊಲೀಸ್ ಅಽಕಾರಿಗಳಿಗೆ ಧಮ್ ಇದ್ದರೆ ಇದನ್ನು ತಡೀರಿ ಅಂತ ಹೇಳಿದ್ದಾರೆ.

ಈ ಮೊದಲು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಅವರ ನೇತೃತ್ವದಲ್ಲಿ ತ್ರಿಶೂಲ ದೀಕ್ಷಾ ಕಾರ್ಯಕ್ರಮ ಮಾಡಿದ್ದೇವು. ಆಗ ಪೊಲೀಸರು ಸಾಕಷ್ಟು ರಿಸ್ಟಿಂಕ್ಷನ್ ಹಾಕಿದ್ದರು. ಈಗ ನಮ್ಮ ಸ್ವಯಂ ರಕ್ಷಣೆಗೋಸ್ಕರ ನಾವು ತ್ರಿಶೂಲ ದೀಕ್ಷಾ ಕಾರ್ಯಕ್ರಮ ಮಾಡುತ್ತೇವೆ. ಅದ್ಯಾವನು ತಡಿತಾನೋ ನೋಡೋಣ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net