

ಬಳ್ಳಾರಿ : ರಾಜ್ಯ ಸರ್ಕಾರ ಪತ್ರಿಕಾ ವಿತರಕರಿಗೆ ಸೌಲಭ್ಯ ಒದಗಿಸಿ, ಆರ್ಥಿಕವಾಗಿ ಸದೃಢಗೊಳಿಸಬೇಕು ಎಂದು ಪತ್ರಿಕಾ ವಿತರಕರ ಸಂಘದ ಜಿಲ್ಲಾಧ್ಯಕ್ಷ ಎಂ. ಕಮೃದ್ದಿನ್ ಹೇಳಿದರು.
ನಗರದ ಪತ್ರಿಕಾ ವಿತರಕರ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾ ವಿತರಕರ ದಿನಾಚರಣೆ ಆಚರಿಸಿ ಮಾತನಾಡಿದರು. ಇತ್ತೀಚೆಗೆ ಸರ್ಕಾರದ ಯಾವುದೇ ನೆರವು ಇಲ್ಲದೆ, ಪತ್ರಿಕಾ ವಿತರಕರು ಸಂಕಷ್ಟದಲ್ಲಿದ್ದಾರೆ. ಆರೋಗ್ಯ ವಿಮೆ, ಮಕ್ಕಳ ಶಿಕ್ಷಣಕ್ಕೆ ನೆರವು ಆಗುವಂತಹ ವಿವಿಧ ಯೋಜನೆಗಳನ್ನು ಸರ್ಕಾರ ರೂಪಿಸಬೇಕು ಎಂದು ಹೇಳಿದರು. ಬಳಿಕ ನಗರದ ಏಜೆಂಟ್ ಹಾಗೂ ಜಿಲ್ಲೆಯ ಪತ್ರಿಕಾ ವಿತರಕರು ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಪ್ರಮುಖರಾದ ರಂಗನಾಥ, ಗೊವಿಂದ, ಎರ‌್ರಿಸ್ವಾಮಿ, ಶ್ರೀನಿವಾಸ, ಕಿರಣಕುಮಾರ, ಇದ್ರಿಸ್, ಪರಾಶುರಾಮ್, ಇಕ್ಬಾಲ್, ಮಲ್ಲಿಕಾರ್ಜುನ, ಗೋಪಾಲ, ಮಂಜುನಾಥ ಇದ್ದರು.