ಸರ್ಕಾರ ವಿಶೇಷ ಪ್ಯಾಕೇಜ್​ ಘೋಷಿಸಲಿ

4
Published on

ಯರಗಟ್ಟಿ: ಪಶ್ಚಿಮ ಟ್ಟದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು 60 ಸಾವಿರ ಹೆಕ್ಟೇರ್​ ಪ್ರದೇಶ ಬೆಳೆ ಹಾನಿಯಾಗಿದೆ. ಸುಮಾರು ಮನೆಗಳು ಹಾಳಾಗಿದ್ದು, ಜಿಲ್ಲೆಗೆ ಬಹಳ ನಷ್ಟವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ವಿಶೇಷ ಪ್ಯಾಕೇಜ್​ ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಬೃಹತ್​ ಜಿಲ್ಲೆಯಾಗಿದ್ದು ಆಡಳಿತ ಹಿತದಷ್ಟಿಯಿಂದ ನೂತನ ಜಿಲ್ಲೆ ೂಷಣೆ ಮಾಡಬೇಕು. ಇದು ಅಭಿವದ್ಧಿಗೆ ಪೂರಕವಾಗಲಿದೆ. ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಮುಖಂಡ ವಿರೂಪಾ ಮಾಮನಿ, ಕೃಷ್ಣಮೂರ್ತಿ ತೊರಗಲ್​, ಚೇತನ ಜಕಾತಿ, ಸದಾನಂದ ಪಾಟೀಲ, ರಾಜು ನಿಡವಣಿ, ಮುನವಳ್ಳಿ ಪುರಸಭೆ ಸದಸ್ಯರಾದ ಶ್ರೀಕಾಂತ ಮಲ್ಲಗೌಡ್ರ , ಸುಭಾಸ ಗದ್ದಿಗೌಡ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net