

ಕಂಪ್ಲಿ: ಬ್ರಹ್ಮಶ್ರೀ ನಾರಾಯಣಗುರು ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಸಮಾಜ ಸುಧಾರಕರಾಗಿದ್ದಾರೆ ಎಂದು ಆರ್ಯ ಈಡಿಗರ ಸಂಘದ ತಾಲೂಕು ಅಧ್ಯಕ್ಷ ಈ.ನರಸಪ್ಪ ಹೇಳಿದರು.
ತಹಸಿಲ್ ಕಚೇರಿ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವದಲ್ಲಿ ಭಾನುವಾರ ಮಾತನಾಡಿದರು. ಎಲ್ಲ ಜಾತಿ, ಧರ್ಮಗಳು ಒಂದೇ ಆಗಿದ್ದು, ಮಾನವರೆಲ್ಲರು ಒಂದೇ ಎಂದು ನಾರಾಯಣಗುರು ಸಾರಿದರು. ಸಮಾಜ ಪರಿವರ್ತನೆ ಮೂಲಕ ಸಾಮರಸ್ಯ ಮೂಡಿಸಲು ಯತ್ನಿಸಿದರು. ಅವರ ತತ್ವ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪಟ್ಟಣದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮತ್ತು ಪುನೀತ್‌ರಾಜಕುಮಾರ್ ಹೆಸರಿನ ಧ್ಯಾನಮಂದಿರ ನಿರ್ಮಿಸುವಲ್ಲಿ ಸರ್ಕಾರ ಮುಂದಾಗಬೇಕು. ಈಡಿಗರ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಸಂಘದ ತಾಲೂಕು ಕಾರ್ಯದರ್ಶಿ ಈ.ಶ್ರೀನಿವಾಸ, ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖ, ವಿಎಗಳಾದ ಲಕ್ಷ್ಮಣ ನಾಯ್ಕ, ಮಾಲತೇಶ ದೇಶಪಾಂಡೆ, ಈಡಿಗ ಸಮುದಾಯದ ಪ್ರಮುಖರಾದ ರಾಮಸಾಗರ ಚಿನ್ನಪ್ಪ, ಗಂಗಾಧರ, ಧನಂಜಯ, ಬಸವರಾಜ, ಕೆಇಬಿ ಸಿದ್ದಪ್ಪ, ಗಂಗಾಧರಗೌಡ್, ಅದ್ವಿಕ್, ಈಡಿಗರ ಸಮುದಾಯದವರಿದ್ದರು.