

ನಾಗರಮುನ್ನೋಳಿ: ಪಂಚಮಸಾಲಿ ಸಮುದಾಯದ ಮೇಲೆ ಲಾಠಿಚಾರ್ಚ್ ಮಾಡಿರುವ ಕ್ರಮ ಖಂಡನೀಯ. ರಾಜ್ಯ ಸರ್ಕಾರ ಕೂಡಲೇ ಮೀಸಲಾತಿ ನೀಡಬೇಕು ಎಂದು ತಾಲೂಕು ಪಂಚಮಸಾಲಿ ಸಮುದಾಯದ ತಾಲೂಕಾಧ್ಯಕ್ಷ ಶಿವಪುತ್ರ ಮನಗೂಳಿ ಹೇಳಿದರು.
ಪಂಚಮಸಾಲಿ ಸಮುದಾಯದ ಮೇಲಿನ ಲಾಠಿ ಪ್ರಹಾರ ಖಂಡಿಸಿ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಗುರುವಾರ ನಿಪ್ಪಾಣಿ-ಮುಧೋಳ ರಸ್ತೆ ಸಂಚಾರ ತಡೆದು ಪ್ರತಿಭಟಿಸಿ ಮಾತನಾಡಿದ ಅವರು, ಹೋರಾಟವನ್ನು ಪೊಲೀಸ್ ಬಲ ಪ್ರಯೋಗಿಸಿ ಸರ್ಕಾರ ಹತ್ತಿಕ್ಕಿದೆ. ಇದಕ್ಕೆ ಕಾರಣವಾದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಸಮುದಾಯಕ್ಕೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಎಸ್.ಕೆ.ಕಾಮಗೌಡ, ಎಂ.ಬಿ.ಆಲೂರೆ, ಸುಧಾಕರ ಪಾಟೀಲ, ಸಾಗರ ಕೊಟಬಾಗಿ, ಸಿದು ಪಾಟೀಲ, ಮಹಾಂತೇಶ ಪಾಟೀಲ, ಚಿದಾನಂದ ಕಪಲಿ, ಕೆಂಚ್ಚಪ್ಪ ಕಾಮಗೌಡ, ಶಿವಾನಂದ ಆಲೂರೆ, ಮಲ್ಲಿಕಾರ್ಜುನ ಈಟಿ, ಬಸವರಾಜ ಮನಗೂಳಿ, ಚಿದಾನಂದ ಕಾಮಗೌಡ, ಶಂಕರ ಕಾಮಗೌಡ, ಶಂಕರ ಬಸಗೌಡನ್ನವರ ಇತರರು ಇದ್ದರು.