

ಚಿಕ್ಕಮಗಳೂರು: ಸರ್ ಎಂ.ವಿಶ್ವೇಶ್ವರಯ್ಯ ಅವರು ದೇಶಕ್ಕೆ ನೀಡಿರುವ ಕೊಡುಗೆಗಳು ಮುಂದಿನ ಪೀಳಿಗೆಗೆ ಸರ್ವೋತ್ತಮ ಸಂದೇಶವಾಗಿದೆ ಎಂದು ಕರ್ನಾಟಕ ಇಂಜಿನಿಯರ್ಗಳ ಫೆಡರೇಷನ್ ಅಧ್ಯಕ್ಷ ಹಾಗೂ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಎಚ್.ಎಂ.ಶಿವಪ್ರಕಾಶ್ ತಿಳಿಸಿದರು.
ನಗರದ ಪಿಡಬ್ಲೂö್ಯಡಿ ಕಚೇರಿ ಆವರಣದಲ್ಲಿ ಕರ್ನಾಟಕ ಇಂಜಿನಿಯರ್ಗಳ ಫೆಡರೇಷನ್ ಹಾಗೂ ಇಂಜಿನಿಯರ್ಗಳ ಸೇವಾ ಸಂಘ ಹಮ್ಮಿಕೊಂಡಿದ್ದ ಸರ್ಎಂವಿ ಅವರ ೧೬೫ನೇ ಜನ್ಮದಿನಾಚರಣೆಯಲ್ಲಿ ವಿಶ್ವೇಶ್ವರಯ್ಯ ಪುತ್ಥಳಿಗೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು.
ಕರ್ತವ್ಯನಿಷ್ಟೆ, ಪ್ರಾಮಾಣಿಕತೆಗೆ ಹೆಸರಾಗಿದ್ದ ವಿಶ್ವೇಶ್ವರಯ್ಯ ಅವರ ಆದರ್ಶ ವ್ಯಕ್ತಿತ್ವವನ್ನು ಶಿಕ್ಷಣದಲ್ಲಿ ಅಳವಡಿಸಿದರೆ ಮುಂದಿನ ಪೀಳಿಗೆಯ ಮಕ್ಕಳ ಭವಿಷ್ಯ ಉಜ್ವಲವಾಗಲು ಸಹಕಾರಿಯಾಗುತ್ತದೆ. ಇಂಜಿನಿಯರಿAಗ್ನಲ್ಲಿ ಹೊಸ ಆವಿಷ್ಕಾರಗಳನ್ನು ತಂದು ಅದರೊಂದಿಗೆ ನೀರಾವರಿ ಯೋಜನೆಗಳು, ಬೃಹತ್ ಡ್ಯಾಂ ನಿರ್ಮಾಣ, ಇರಿಗೇಶನ್ ನಿರ್ವಹಣೆ ಮಾಡಿದಲ್ಲಿ ಇಂಜಿನಿಯರಿAಗ್, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಜೊತೆ ದೇಶದ ಪ್ರಗತಿಗೆ ಪೂರಕವಾಗಿರುತ್ತದೆ ಎಂದರು.
ಕೇAದ್ರ ಸರ್ಕಾರ ಈಗಾಗಲೆ ದೇಶದಲ್ಲಿ ಉತ್ತಮ ಹೈವೇ ರಸ್ತೆಗಳನ್ನು ನಿರ್ಮಿಸುತ್ತಿದ್ದು ಈ ಸಂಬAಧ ಭಾರತ್ ಮಾಲಾ ಯೋಜನೆಯಡಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೂ ಕ್ವಾಟರ್ಲ್ಯಾಂಗಲ್ ರಸ್ತೆಗಳನ್ನು ನಿರ್ಮಿಸಿ ಅಭಿವೃದ್ದಿಯತ್ತ ಹೆಜ್ಜೆ ಹಾಕುತ್ತಿದೆ. ಇದೇರೀತಿ ಪಶ್ಚಿಮಘಟ್ಟಗಳು ಅಭಿವೃದ್ಧಿ ಹೊಂದಲು ರಾಯಚೂರು-ಮಂಗಳೂರು ಹೆದ್ದಾರಿ ಕಾರಿಡಾರ್ನ್ನು ನಿರ್ಮಿಸಲು ಮುಂದಾದಲ್ಲಿ ದಕ್ಷಿಣ ಭಾರತದಲ್ಲಿ ಉತ್ತಮ ಸಂಚಾರ ವ್ಯವಸ್ಥೆಗೆ ಅನುಕೂಲವಾಗಲಿದೆ. ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾಗುವಂತೆ ಸರ್ ಎಂವಿ ಅವರು ಹಲವಾರು ಯೋಜನೆ ಹಮ್ಮಿಕೊಂಡು ಭದ್ರಾವತಿ ಕಬ್ಬಿಣದ ಅದಿರು ಕಾರ್ಖಾನೆ ಅಭಿವೃದ್ದಿಗೆ ಒತ್ತುಕೊಟ್ಟಿದ್ದರು. ಅದು ಸ್ಥಗಿತಗೊಂಡಿದ್ದರೂ ಸಹ ಪುನಃ ಅದನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಇಂಜಿನಿAiÀiರ್ಗಳಾದ ಮಲ್ಲಿಕಾರ್ಜುನ್, ಗವಿರಂಗಪ್ಪ, ವೇಣುಗೋಪಾಲ್, ದಾವೂದ್ ಇದ್ದರು.