ಸರ್ ಎಂ.ವಿಶ್ವೇಶ್ವರಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ

15-09--krs1
Published on


ಕೆ.ಆರ್.ಸಾಗರ: ಇಂಜಿನಿಯರ್‌ಗಳ ದಿನದ ಅಂಗವಾಗಿ ಕೃಷ್ಣರಾಜಸಾಗರ ಅಣೆಕಟ್ಟೆಯ ಮುಖ್ಯದ್ವಾರದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಜಯಂತ್ ಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯ ಅವರದು ದೂರ ದೃಷ್ಟಿಯ ವ್ಯಕ್ತಿತ್ವ. ದೇಶದ ವಿವಿಧೆಡೆ ಕಾರ್ಯನಿರ್ವಹಿಸಿ ಮೆಚ್ಚುಗೆ ಪಡೆದರು. ಅವರು ಎಂದೂ ಸ್ವಾರ್ಥಕ್ಕೆ ಕೆಲಸ ಮಾಡಿದವರಲ್ಲ. ದೇಶದ ಅಭಿವೃದ್ಧಿಗೆ ವಿವಿಧೆಡೆ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಅದರ ಫಲವಾಗಿ ಪ್ರಸ್ತುತ ವಿಶ್ವವಿಖ್ಯಾತ ಕೆ.ಆರ್.ಸಾಗರ ಅಣೆಕಟ್ಟೆ, ಬ್ಯಾಂಕ್‌ಗಳು, ಕಾರ್ಖಾನೆಗಳು ನಿರ್ಮಾಣವಾಗಿವೆ ಎಂದು ಸ್ಮರಿಸಿದರು.

ಕೆ.ಆರ್.ಸಾಗರ ಅಣೆಕಟ್ಟೆ ನಿರ್ವಹಣೆ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಫ್ಹಾರೂಕ್ ಅಬು, ನಂ.3 ವಿ.ಸಿ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಯರಾಂ, ತಾಂತ್ರಿಕ ಸಹಾಯಕಿ ರಶ್ಮಿ, ಕೆ.ಆರ್.ಸಾಗರ ಕಾ.ನೀ.ನಿಗಮದ ಸಹಾಯಕ ಇಂಜಿನಿಯರ್‌ಗಳಾದ ಚಂದ್ರಶೇಖರಪ್ಪ, ಲೋಹಿತ್, ಸುರೇಶ್ ಬಾಬು, ವೇಣುಗೊಪಾಲ, ಕುಮಾರಸ್ವಾಮಿ, ಜಯರಾಮಯ್ಯ, ಶ್ವೇತಾ, ಪುನೀತ್, ಅಭಿಲಾಷ್, ಅಕೀಬ್ ಜಾವಿದ್, ಗಣೇಶ್, ಕೆ.ಆರ್.ಸಾಗರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಶಿವಪ್ಪ, ಖಚಾಂಚಿ ನಾಗೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net