ಸರಾಯಿ ಕುಡಿದು, ಪಾರ್ಟಿಗೆ ತೆರಳುವ ವೇಳೆ ಅವಘಡ: ಯುವಕ ಸಾವು

Crime Logo
Published on

ಕಲಬುರಗಿ: ಸ್ನೇಹಿತರೊಂದಿಗೆ ಪಾರ್ಟಿ ಮಾಡಿ, ಊಟಕ್ಕೆಂದು ನರೋಣಾ ಗ್ರಾಮಕ್ಕೆ ತೆರಳುವ ವೇಳೆ ಕುಮಸಿ ಗ್ರಾಮದ ವ್ಯಾಪ್ತಿಯ ಸೀಮಿ ಲಕ್ಷ್ಮೀ  ದೇವಸ್ಥಾನ ಸಮೀಪ ಬೈಕ್ ಅಪಘಾತ ಸಂಭವಿಸಿ, ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ನಗರದ ರಿತಿಕ್ ಗುತ್ತೇದಾರ್ (೨೧) ಮೃತ ಯುವಕ.

ಘಟನೆ ವಿವರ: ನಾಲ್ವರು ಸ್ನೇಹಿತರು ಕೂಡಿಕೊಂಡು ನಗರದ ಹೊರವಲಯದ ದಾಬಾ ಒಂದರಲ್ಲಿ ಮದ್ಯ ಕುಡಿದು, ಚಿಕನ್ ಪಾರ್ಟಿ ಮಾಡಲು ನರೋಣಾ ಗ್ರಾಮಕ್ಕೆ ಹೋಗುವಾಗ ಮಾರ್ಗ ಮಧ್ಯೆ ಕುಮಸಿ ವ್ಯಾಪ್ತಿಯ ರಸ್ತೆಯಲ್ಲಿ ಬೈಕ್ ಚಾಲಕ ಶರಣು ನೀರಾ ನಿಯಂತ್ರಣ ತಪ್ಪಿ, ಅಪಘಾತ ಸಂಭವಿಸಿದೆ. ಈ ವೇಳೆ ಹಿಂಬದಿ ಕುಳಿತ್ತಿದ್ದ ರಿತಿಕ್ ತಲೆಗೆ ಗಂಭೀರ ಗಾಯಗಳಾಗಿವೆ. ಜತೆಗಿದ್ದ ಇತರ ಸ್ನೇಹಿತರು ಗಾಯಗೊಂಡಿದ್ದ ಇಬ್ಬರನ್ನು ನಗರದ ಮನೆಯೊಂದರಲ್ಲಿ ತಂದು ಮಲಗಿಸಿದ್ದಾರೆ. ಆದರೆ ಬೆಳಗ್ಗೆ ಹೊತ್ತಿಗೆ ರಿತಿಕ್ ಮೃತಪಟ್ಟಿದ್ದಾನೆ. ಇದಕ್ಕೆ ಚಾಲಕ ಶರಣು ನೀಲಾ ಕಾರಣ ಎಂದು ಯುವಕನ ತಂದೆ ರಾಜಕುಮಾರ ಗುತ್ತೇದಾರ್ ಸಂಚಾರ ಪೊಲೀಸ್ ಠಾಣೆ -೨ಕ್ಕೆ ದೂರಿನಂತೆ, ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net