ಸರಸ್ವತಿ ಒಲಿದರೆ ಲಕ್ಷ್ಮೀ ತಾನಾಗೇ ಬರುತ್ತಾಳೆ

Screenshot_20230106_171038
Published on

ಹೊಳೆನರಸೀಪುರ: ವ್ಯಾಸಂಗದ ಸಮಯದಲ್ಲಿ ವಿದ್ಯಾರ್ಥಿಗಳು ಲಕ್ಷ್ಮೀಯ ಹಿಂದೆ ಬೀಳದೆ ಸರಸ್ವತಿಯನ್ನು ಒಲಿಸಿಕೊಂಡರೆ ಲಕ್ಷ್ಮೀ ತಾನಾಗೇ ಬರುತ್ತಾಳೆ ಎಂದು ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ ಸಲಹೆ ನೀಡಿದರು.


ಪಟ್ಟಣದ ಸ್ವರ್ಣ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಗುರುವಾರ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.


ಈ ಹಿಂದೆ ವಿದ್ಯೆ ಕಲಿಯಲು ಹೆಚ್ಚಿನ ಅವಕಾಶ ಇರಲಿಲ್ಲ. ಆರ್ಥಿಕ ಸಾಮರ್ಥ್ಯ, ಶಾಲಾ, ಕಾಲೇಜುಗಳ ಕೊರತೆಯಿಂದ ಹಿಂದಿನವರು ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾಗಲಿಲ್ಲ. ಆದರೆ ಇಂದು ವಿದ್ಯಾಭ್ಯಾಸ ಮಾಡಲು ಹೆಚ್ಚಿನ ಅವಕಾಶ ಇದೆ. ಈ ಅವಕಾಶವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಬೆಳೆಯಬೇಕು. ನಮ್ಮ ಜಿಲ್ಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಶಾಲಾ, ಕಾಲೇಜುಗಳು, ಉಚಿತ ವಸತಿ ನಿಲಯಗಳು ಇದ್ದು, ಇವುಗಳ ಸದ್ಬಳಕೆಯಾಗಬೇಕು ಎಂದು ಕಿವಿಮಾತು ಹೇಳಿದರು.


ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಕರನ್ನು ಇದೆ ವೇಳೆ ಸನ್ಮಾನಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಶೋಭಾ ಬಾಲಕೃಷ್ಣ, ವೈದ್ಯ ಡಾ.ನಟರಾಜ್, ನಿವೃತ್ತ ಪ್ರಾಂಶುಪಾಲ ಎಚ್.ಎಸ್.ಪುಟ್ಟಸೋಮಪ್ಪ, ಪ್ರಾಂಶುಪಾಲ ಡಿ.ಕೆ.ಕುಮಾರಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net