

ಸಿರವಾರ: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಜಿಲ್ಲೆ ಬಂದ್ ಕರೆ ಹಿನ್ನಲೆ ಗುರುವಾರ ಪಟ್ಟಣದಲ್ಲಿ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ಮೂಲಕ ಬಂದ್‌ಗೆ ಬೆಂಬಲ ಸೂಚಿಸಿ ಯಶಶ್ವಿಗೊಳಿಸಿದರು.
ಪಟ್ಟಣದಲ್ಲಿ ರಾಯಚೂರು-ಲಿಂಗಸೂಗುರು ಮುಖ್ಯ ರಸ್ತೆಯ ಬಸವ ವೃತ್ತದಲ್ಲಿ ರಸ್ತೆ ಮಧ್ಯೆ ಕುಳಿತು ಹೋರಾಟ ಮಾಡಲಾಯಿತು. ಮೆಡಿಕಲ್, ಆಸ್ಪತ್ರೆ ಸೇವೆ ಲಭ್ಯವಿತ್ತು. ಉಳಿದ ವ್ಯಾಪಾರ ವಹಿವಾಟುಗಳನ್ನು ಬೆಳಗ್ಗೆಯಿಂದಲೆ ಬಂದ್ ಮಾಡಲಾಗಿತ್ತು. ಬಸವ ವೃತ್ತ, ಮಾನ್ವಿ ಕ್ರಾಸ್ ನಿಂದ ಪಟ್ಟಣಕ್ಕೆ ವಾಹನಗಳನ್ನು ಪ್ರವೇಶ ಮಾಡದಂತೆ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಇದರಿಂದ ರಸ್ತೆಗಳು ಬಿಕೋ ಎನ್ನುತ್ತಿತ್ತು. ಇನ್ನೂ ಕೆಲ ಹಳ್ಳಿಯ ಜನರಿಗೆ ಮಾಹಿತಿ ಇಲ್ಲದ ಕಾರಣ ಪಟ್ಟಣಕ್ಕೆ ಆಗಮಿಸಿ ವಾಹನಗಳಿಗಾಗಿ ಪರದಾಡುವಂತಾಗಿತ್ತು. ಇನ್ನೂ ಬೇರೆ ಬೇರೆ ಊರುಗಳಿಂದ ಆಗಮಿಸುವ ವಾಹನಗಳು ತುಂಗಭದ್ರಾ ಎಡದಂಡೆಯ ಕಾಲುವೆ ಮೇಲೆ ಓಡಾಡಿದವು.
ಎಸಿಗೆ ಮುಟ್ಟಿದ ಬಂದ್ ಬಿಸಿ: ಲಿಂಗಸೂಗುರು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಕಾರ್ಯದ ನಿಮಿತ್ಯ ರಾಯಚೂರಿಗೆ ತೆರಳುತ್ತಿದ್ದರು ಬಂದ್ ಗೆ ಕರೆ ನೀಡಿದ ಕಾರ್ಯಕರ್ತರು ಎಸಿ ಅವರ ವಾಹನ ಬಿಡದ ಕಾರಣ ಕಾಲುವೆ ಮೇಲೆ ತೆರಳಿದರು. ಬಂದ್ ಹಿನ್ನಲೆ ಸಂಪೂರ್ಣ ಬಂದ್ ಆದಕಾರಣ ಜನರು ಪರದಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಿರಿಲಿಂಗಪ್ಪ, ಪ್ರಮುಖರಾದ ಹನುಮಂತ ಬಡ್ಡ, ರಾಜಪ್ಪ ಹೊನ್ನಟಗಿ, ಸವಾರೆಪ್ಪ, ಎಂ.ಪ್ರಕಾಶಪ್ಪ, ರಾಮಯ್ಯ ಬೈನೇರ್, ಶಿವಪ್ಪ ಗೊಲ್ಲದಿನ್ನಿ, ಹನುಮಂತ್ರಾಯ ಗಚ್ಚಿನಮನೆ ಅತ್ತನೂರು, ಜಯಪ್ಪ ಕೆಂಪು, ಜಯಪ್ಪ ಗುತ್ತೇದಾರ, ಹುಲಿಗೆಪ್ಪ ಕೆರಿಬಿಲ್ಕರ್, ಮಲ್ಲಪ್ಪ ದೊಡ್ಡನೆ, ವಿಜಯರಾಣಿ, ಅರಳಪ್ಪ ಯದ್ದಲದಿನ್ನಿ, ಚನ್ನಪ್ಪ ಬೂದಿನಾಳ, ಎಂ.ಮನೋಹರ, ಜಯರಾಜ ಜಡಿಮಳೆ, ಎಲ್.ವಿ.ಸುರೇಶ, ಪ.ಪಂ. ಸದಸ್ಯರಾದ ಕೃಷ್ಣ ನಾಯಕ, ಅಜೀತ್ ಕುಮಾರ್ ಹೊನ್ನಟಗಿ, ಎಚ್.ಮಾರ್ಕಪ್ಪ, ಗ್ಯಾನಪ್ಪ ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಡಿ.ವಲಿ ಗುತ್ತೇದಾರ, ಸತ್ತರ್ ಸಾಬ್, ಇಬ್ರಾಹಿಂ, ಇಸ್ಮಾಯಿಲ್, ಮುಖಂಡರಾದ ಮಾರೇಶ ಭಂಡಾರಿ, ಚಂದ್ರಪ್ಪ ಕವಿತಾಳ, ಅರಳಪ್ಪ ಕವಿತಾಳ, ಹುಲಗೆಪ್ಪ ಸೈದಾಪುರ, ದುರುಗಪ್ಪ ಕಲಂಗೇರಾ, ಹನುಮಂತ ಕ್ಯಾದಿಗ್ಗೇರಿ, ದಾನಪ್ಪ ಸಿರವಾರ, ಲಕ್ಷಣ ಸಿರವಾರ, ಡಿ.ಹೆಚ್.ಭೀಮಣ್ಣ, ಜೆ.ಭೀಮರಾಯ ಅತ್ತನೂರು, ವಿರೂಪಾಕ್ಷಿ ಜಗ್ಲಿ, ಮಹಾಂತೇಶ ಮ್ಯಾತ್ರಿ, ಬಸವರಾಜ ಸಕ್ರಿ, ನಾಗರಾಜ ಗಿಂಡಿ, ದುರ್ಗಾಪ್ರಸಾದ್, ಮಲ್ಲೇಶ ಮಾಚನೂರು,ಎಂ.ಬಿ.ಮಾರೆಪ್ಪ ಮಾಚನೂರು, ಬಾಲಪ್ಪ, ಹನುಮಂತ, ಯೇಸುಮಿತ್ರ ಮಚ್ಚಿ, ಮೌನೇಶ ಪಿತಗಲ್, ಮೇಶಾಕ್ ದೊಡ್ಮನೆ, ಡೇವಿಡ್ ಸಿರವಾರ, ಅನಿಲ್, ರಾಮು ಗಿಂಡಿ ಇತರರಿದ್ದರು.