ಸರಳ ರೀತಿಯಲ್ಲಿ ಗಣೇಶ ವಿಸರ್ಜನೆ

2608Klb11
Published on

ಕಲಬುರಗಿ: ನಗರ ಸೇರಿ ಜಿಲ್ಲೆಯ ವಿವಿಧೆಡೆ ಐದನೇ ದಿನದಂದು ಗಣೇಶ ಮೂರ್ತಿ ಗಳ ವಿಸರ್ಜನೆ ಬುಧವಾರ ಜರುಗಿತು. ಮೆರವಣಿಗೆ ಅಬ್ಬರವಿಲ್ಲದೆ ಸರಳ ರೀತಿಯಲ್ಲಿ ವಿಸಜರ್ಿಸಲಾಯಿತು. ಶರಣಬಸವೇಶ್ವರ ಕೆರೆಯಲ್ಲಿ ಗಣೇಶ ವಿಗ್ರಹ ವಿಸರ್ಜಿಸಿ ಭಕ್ತರು ಸಂಭ್ರಮಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ನಗರದ ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳ ಸರಳ ರೀತಿಯಲ್ಲಿ ಮೆರವಣಿಗೆ ನಡೆಸಿ ಕೆರೆ ಹತ್ತಿರ ಸಮಾಗಮಗೊಂಡಿದ್ದವು. ನಂತರ ಒಂದೊಂದು ಮೂರ್ತಿಗಳು ವಿಸರ್ಜಿಸಲಾಯಿತು. ಪಾಲಿಕೆ ಸಿಬ್ಬಂದಿ ವಿಗ್ರಹ ವಿಸರ್ಜನೆ ಕಾರ್ಯ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net