ಸರಳ ಭಾಷೆಯ ವರದಿ ಓದುಗರಿಗೆ ತಲುಪಲಿ

ctd -----1
Published on

ಚಿತ್ರದುರ್ಗ: ಸರಳವಾಗಿ ಬರೆಯುವುದು ಸುಲಭದ ಕೆಲಸವಲ್ಲ. ಸರಳವಾದ ಭಾಷೆಯಲ್ಲಿ ವರದಿ ಬರೆಯುವ ಮೂಲಕ ಓದುಗರನ್ನು ತಲುಪುವಂಥ ಕೌಶಲ ರೂಢಿಗೆ ಮುಖ್ಯಮಂತ್ರಿ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌ಮಟ್ಟು ಪತ್ರಕರ್ತರಿಗೆ ಸಲಹೆ ನೀಡಿದರು.ಕರ್ನಾಟ ಕ ಸಾಹಿತ್ಯ ಅಕಾಡೆಮಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಪತ್ರಿಕಾ ಭವನ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ 3 ದಿನಗಳ ಕಾಲ ಆಯೋಜಿಸಿರುವ ಯುವ ಪತ್ರಕರ್ತರಿಗೆ ಕನ್ನಡ ಸಾಹಿ ತ್ಯಾಭಿರುಚಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸೃಜನಶೀಲ ಬರವಣಿಗೆಗೆ ಸಾಹಿತ್ಯದ ಓದು ಅಗತ್ಯ. ಹಿಂದಿನ ತಲೆ ಮಾರಿನವರು ಪತ್ರಿಕೋದ್ಯಮವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿರಲಿಲ್ಲ.ಪ್ರಸಿದ್ಧ ಪತ್ರಕರ್ತರಾದ ಖುಷ್ವಂತ್‌ಸಿಂಗ್‌ವಿನೋದಮೆಹ್ತಾ,ರಾಜೀವ್ ಸ ರ್ ದೇಸಾಯಿ,ಅರುಣ್ ಶೌರಿಯಂಥವರು ಬೇ ರೆ,ಬೇರೆ ವಿಷಯಗಳಲ್ಲಿ ಪದವಿ ಪಡೆದಿದ್ದರೂ ಸಾಹಿತ್ಯ ಹಾಗೂ ಬರವಣಿಗೆ ಮೇಲಿನ ಪ್ರೀತಿಯಿಂದ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಡಿ.ವಿ.ಗುಂಡಪ್ಪ,ಕಡೆಗೊಡ್ಲು ಶಂಕರಭಟ್ಟ,ಬೆನಗಲ್‌ರಾಮರಾಯರು,ಲಂಕೇಶ್‌ರಂಥ ಸಾಹಿತ್ಯ ನಂಟು ಹೊಂದಿದ್ದ ದಿಗ್ಗಜರು ಪತ್ರಿಕೆಗಳನ್ನು ನಡೆಸಿದ್ದಾರೆ.

ಸಾಹಿತ್ಯದ ಓದಿನಿಂದ ಪತ್ರಕರ್ತರ ಅನುಭವ,ಶಬ್ಧ ಸಂಪತ್ತು ವಿಸ್ತಾರಗೊಳ್ಳುತ್ತದೆ. ತಂತ್ರಜ್ಞಾನದಿಂದಾಗಿ ಪತ್ರಕರ್ತ ವೃತ್ತಿಯಲ್ಲಿ ಆಗಿರು ವ ಬದಲಾವಣೆ ಇನ್ಯಾವ ವೃತ್ತಿಯಲ್ಲೂ ಆಗಿಲ್ಲ. ಕೃತಕ ಬುದ್ದಿಮತ್ತೆ ತಂತ್ರಾಂಶಗಳು ಸೃಜನಶೀಲ ಕ್ಷೇತ್ರ ವನ್ನು ಪ್ರವೇಶಿಸಿವೆ. ಭಾಷಾಂತರ ತಂ ತ್ರಾಂಶ ಮಾಧ್ಯಮ ಕ್ಷೇತ್ರಕ್ಕೆ ಸಹಕಾರಿಯಾಗಿದ್ದರೂ ಸೃಜನಶೀಲ ಬರವಣಿಗೆ ಕಲೆ ರೂಢಿಸಿ ಕೊಳ್ಳ ಬೇಕಿ ದೆ. ವಿವಿಗಳಲ್ಲಿ ಪ್ರಸ್ತುತ ಮಾಧ್ಯಮ ಕ್ಷೇತ್ರದ ಅಗತ್ಯಕ್ಕೆ ತಕ್ಕಂತೆ ಪಠ್ಯಕ್ರಮ ರೂಪಿಸಿ,ಕನ್ನಡ ಸಾಹಿತ್ಯವನ್ನು ಬೋಧಿಸಬೇಕಿದೆ ಎಂದರು.

ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಮಾತನಾಡಿ,ಪತ್ರಕರ್ತರಲ್ಲಿ ಕನ್ನಡ ಸಾಹಿತ್ಯ ಅಭಿರುಚಿ ಸೃಷ್ಟಿಸುವ ಕೆಲಸವನ್ನು ಅಕಾ ಡೆಮಿ ಮಾಡುತ್ತಿದೆ. ಮನಃ ಪರಿವರ್ತನೆ ಮೌಲ್ಯಗಳಿರುವ ಕನ್ನಡ ಸಾಹಿತ್ಯವನ್ನು ಕೈದಿಗಳಿಗೆ ತಿಳಿಸಲು ಶಿಬಿರ ಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕರ ಪ್ರಜ್ಞಾವಂತರನ್ನಾಗಿ ಮಾಡುವ ಕೆಲಸವನ್ನು ಮಾಧ್ಯಮಗಳು ಮಾಡಬೇಕಿದೆ ಎಂದರು.

ಅಕಾಡೆಮಿ ರಿಜಿಸ್ಟಾರ್ ಎನ್.ಕರಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ,ಜನಸಾಮಾನ್ಯರಿಗೆ ಕನ್ನಡ ಸಾಹಿತ್ಯವನ್ನು ಪರಿಚಯಿಸಲು ಅಕಾ ಡೆಮಿಯಿಂದ ಸಂತೆಯಲ್ಲಿ ಸಾಹಿತ್ಯ ಕಾರ‌್ಯಕ್ರಮ ರೂಪಿಸಲಾಗಿದೆ. ಬೇಸಾಯದ ಬದುಕು ಸರಣಿಯಡಿ ನಾಡಿನ ಕೃಷಿ ಸಾಧಕರು,50 ಮ ಹಿಳಾ ಸಾಧಕಿಯರು,ಕನ್ನಡ ಭಾರತಿ ಯೋಜನೆಯಡಿ 150 ಲೇಖಕರ ಕೃತಿಗಳನ್ನು ಪ್ರಕಟಿಸಲಾಗುತ್ತಿದೆ.ವಿದ್ಯಾರ್ಥಿಗಳಲ್ಲಿ ಸೌಹಾರ್ದ ಭಾ ವನೆ ಬೆಳೆಸಲು ಕನ್ನಡ ಸಾಹಿತ್ಯವನ್ನು ಪರಿಚಯಿಸಲಾಗುವುದು ಎಂದರು.

ಎಡಿಸಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿದರು.ಶಿಬಿರದ ನಿರ್ದೇಶಕ ಪ್ರೊ.ಎಂ.ಅಬ್ದುಲ್‌ರೆಹಮಾನ್ ಪಾಷ,ಸಂಘದ ಅಧ್ಯಕ್ಷ ಬಿ.ದಿ ನೇಶ್ ಗೌಡಗೆರೆ,ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್.ಅಹೋಬಳಪತಿ,ಸಾಹಿತ್ಯ ಅಕಾಡೆಮಿ ಸಂಚಾಲಕಿ ಡಾ.ಪಿ.ಚಂದ್ರಿಕಾ, ಶಿಬಿರದ ಸಹ ನಿರ್ದೇಶಕರಾದ ನಾಕೀಕೆರೆ ತಿಪ್ಪೇಸ್ವಾಮಿ,ಮಮತಾ ಅರಸೀಕೆರೆ ಇತರರು ಇದ್ದರು.

ಕೋಟ್

ಸಾಹಿತ್ಯ,ಇತಿಹಾಸದ ತಿಳಿವಳಿಕೆ ಪತ್ರಕರ್ತರಿಗೆ ಬಹಳ ಮುಖ್ಯ.ನಾಡು,ಸಂಸ್ಕೃತಿ,ಭಾಷೆ ಅರಿಯದಿದ್ದರೆ ಉತ್ತಮ ಬರವಣಿಗೆ ಅಸಾಧ್ಯ. ಸಾಮಾಜಿಕ ಜಾಲತಾಣಗಳಿಂದಾಗಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಪತ್ರಿಕೋ ದ್ಯಮಕ್ಕೂ ಸಾಹಿತ್ಯಕ್ಕೂ ಬಹಳ ನಂಟಿದೆ. ಬರ ಹಗಳಲ್ಲಿ ಸತ್ವವಿರಬೇಕಾದರೆ ಲೋಕಾನುಭವ,ನಿರಂತರ ಓದಿನ ಅಗತ್ಯವಿದೆ.

ಬಿ.ಟಿ.ಕುಮಾರಸ್ವಾಮಿ,ಎಡಿಸಿ,ಚಿತ್ರದುರ್ಗ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net