ಸರಣಿ ಕಳ್ಳತನಕ್ಕೆ ಬೆಚ್ಚಿ ಬಿದ್ದ ಗುಮ್ಮಟ ನಗರಿ ಜನ, ಮನೆ-ಅಂಗಡಿಗಳಿಗೆ ಕನ್ನ, ಸಿಸಿಟಿವಿಯಲ್ಲಿ ದೃಶ್ಯಾವಳಿ ಸೆರೆ

1662792239763
Published on

ವಿಜಯಪುರ: ಸರಣಿ ಕಳ್ಳತನ ಪ್ರಕರಣಗಳಿಗೆ ಗುಮ್ಮಟ ನಗರಿಯ ಜನತೆ ಬೆಚ್ಚಿ ಬಿದ್ದಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಮುಸುಕುಧಾರಿಗಳ ತಂಡವೊಂದು ದೊಣ್ಣೆ ಹಿಡಿದುಕೊಂಡು ಸಂಚರಿಸುವ ಮೂಲಕ ಭಯ ಹುಟ್ಟಿಸಿತ್ತು. ಪೊಲೀಸರು ಕೂಡ ಅಷ್ಟೇ ಚುರುಕಿನ ಕಾರ್ಯಾಚರಣೆ ನಡೆಸಿ ಮುಸುಕುಧಾರಿಗಳನ್ನು ಬಂಧಿಸಿತ್ತು. ಇದೀಗ ಮತ್ತೆ ಮುಸುಕುಧಾರಿಗಳು ಕಳ್ಳತನ ನಡೆಸಿದ್ದಾರೆ.

ಶುಕ್ರವಾರ ನಸುಕಿನ ಜಾವ ಮನೆ ಹಾಗೂ ಅಂಗಡಿಗಳಿಗೆ ಕನ್ನ ಹಾಕಿರುವ ಕಳ್ಳರು ನಗದು ಹಾಗೂ ಬೆಲೆಬಾಳುವ ಸಾಮಾಗ್ರಿ ದೋಚಿ ಪರಾರಿಯಾಗಿದ್ದಾರೆ. ಅಂಗಡಿಯೊಂದರಲ್ಲಿ ಕಳ್ಳತನ ಮಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತರುಣನಾಗಿದ್ದ, ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವ ಕಳ್ಳನ ಕರಾಮತ್ತು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಜಲನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net