ಸರಗೂರಲ್ಲಿ ಸಾಮೂಹಿಕ ಪ್ರಾರ್ಥನೆ

31 SARAG 2
Published on

ಸರಗೂರು: ಪಟ್ಟಣದ ಜಾಮಿಯಾ ಮಸೀದಿ ಆವರಣದಲ್ಲಿ ಸೋಮವಾರ ನೂರಾರು ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.

ಸಮುದಾಯದ ಮುಖಂಡ ಹಿದಾಯಿತ್ ಶರೀಫ್ ಮಾತನಾಡಿ, ಈ ಹಬ್ಬದ ಆಚರಣೆ ಮೂಲಕ ಅಲ್ಲಾನಲ್ಲಿ ನಂಬಿಕೆ ಇಟ್ಟುಕೊಳ್ಳುತ್ತೇವೆ. ಪ್ರಾರ್ಥನೆ, ದಾನ-ಧರ್ಮದಲ್ಲಿ ತೊಡಗುವುದು ಮಾತ್ರವಲ್ಲದೆ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ತಮ್ಮ ಒಡನಾಟವನ್ನು ಇನ್ನಷ್ಟು ಗಟ್ಟಿಯಾಗಿಸುತ್ತಾರೆ ಎಂದು ತಿಳಿಸಿದರು.

ಪ್ರಮುಖ ಬೀದಿ ಹಾಗೂ ಹಲವೆಡೆ ಸಾರ್ವಜನಿಕರಿಗೆ ಜ್ಯೂಸ್, ಮಜ್ಜಿಗೆ ವಿತರಿಸಿದರು. ಜಾಮಿಯಾ ಮಸೀದಿ ಗುರುಗಳಾದ ಅಬ್ದುಲ್ ರಶೀದ್ ಸಾಬ್, ಹಿದಾಯತ್ ಶರೀಫ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಮೀರ್ ಸುಹೇಲ್, ಖಲೀಲ್, ಯಾಸೀನ್, ದಾದು ವಾಜಿದ್, ರಾಹಿಲ್ ಪಾಷಾ, ಹಸೇನ್, ಸಾದಿಕ್ ಪಾಷಾ, ಅಬ್ದುಲ್ ವಾಹಿದ್ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net