ಸರಕು ಸಾಗಣೆಯಲ್ಲಿ ದಕ್ಷಿಣ ಮಧ್ಯೆ ರೈಲ್ವೆ ವಿಕ್ರಮ

09-01-Shiva-1
ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ರೈಲ್ವೆ ವ್ಯಾಗನ್‌ಗಳ ಮೂಲಕ ಸರಬರಾಜು ಮಾಡುತ್ತಿರುವ ಕಲ್ಲಿದ್ದಲು.
Published on

ರಾಯಚೂರು
ಭಾರತೀಯ ರೈಲ್ವೆ ಇಲಾಖೆ ಸರಕು ಸಾಗಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ದಕ್ಷಿಣ ಮಧ್ಯ ರೈಲ್ವೆ ಹೊಸ ವಿಕ್ರಮವನ್ನು ಸಾಸಿದ್ದು, ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ಅಂತ್ಯದೊಳಗೆ 100 ದಶಲಕ್ಷ ಮೆಟ್ರಿಕ್ ಟನ್ ಸರಕು ಸಾಗಣೆ ಮಾಡಿ ಗಣನೀಯ ಸಾಧನೆ ಮಾಡಿದೆ.
ಕಳೆದ ಆರ್ಥಿಕ ವರ್ಷದಲ್ಲಿ 284 ದಿನಗಳಲ್ಲಿ 100 ದಶಲಕ್ಷ ಮೆಟ್ರಿಕ್ ಟನ್ ಸರಕು ಸಾಗಣೆ ಗುರಿಯನ್ನು ತಲುಪಿತ್ತು. ಆದರೆ ಈ ಬಾರಿ ಕೇವಲ 270 ದಿನಗಳಲ್ಲಿ 100 ದಶಲಕ್ಷ ಮೆಟ್ರಿಕ್ ಟನ್ ಸರಕು ಸಾಗಣೆ ಮಾಡುವ ಮೂಲಕ ಸರಕು ಸಾಗಣೆ ಕ್ಷೇತ್ರದಲ್ಲಿ ದಕ್ಷಿಣ ಮಧ್ಯ ರೈಲ್ವೆ ಇತರ ರೈಲ್ವೆ ವಲಯಗಳಲ್ಲಿ ಮುಂದಿದೆ.
ವಲಯ ಸರಕು ಸಾಗಣೆಗೆ ಅಗತ್ಯವಿರುವ ವ್ಯಾಗನ್‌ಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸುವುದರ ಜತೆಗೆ ಸಮಯಕ್ಕೆ ಸರಿಯಾಗಿ ಸರಕು ಸಾಗಿಸುವುದಕ್ಕೆ ಹೆಚ್ಚಿನ ಒತ್ತು ನೀಡಿರುವುದರಿಂದ ಗಣನೀಯ ಸಾಧನೆ ಮಾಡಲು ಸಾಧ್ಯವಾಗಿದೆ. ಜತೆಗೆ ಸರಕುಗಳ ಸುರಕ್ಷತೆಗೂ ಹೆಚ್ಚಿನ ಗಮನ ಹರಿಸಿರುವುದು ಕಾರಣವಾಗಿದೆ.
ಆರ್ಥಿಕ ವರ್ಷದ 100 ದಶಲಕ್ಷ ಮೆಟ್ರಿಕ್ ಟನ್ ಸರಕು ಸಾಗಣೆಯಲ್ಲಿ 50.63 ದಶಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು, 25.22 ದಶಲಕ್ಷ ಮೆಟ್ರಿಕ್ ಟನ್ ಸಿಮೆಂಟ್, 5.96 ದಶಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ, 5.16 ದಶಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯ, 3.39 ದಶಲಕ್ಷ ಮೆಟ್ರಿಕ್ ಟನ್ ಸ್ಟೀಲ್, 2.72 ದಶಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಸಾಗಣೆ ಮಾಡಲಾಗಿದೆ.
ಪ್ರಮುಖವಾಗಿ ಹೈದರಾಬಾದ್ ಕರ್ನಾಟಕದ ರಾಯಚೂರು, ಬಳ್ಳಾರಿ, ಯಾದಗಿರಿ ಜಿಲ್ಲೆಗಳು ವಲಯದ ಸರಕು ಸಾಗಣೆಯಲ್ಲಿ ಗಣನೀಯ ಸಾಧನೆಗೆ ಹೆಚ್ಚಿನ ಕೊಡುಗೆಯನ್ನು ನೀಡಿವೆ. ಜತೆಗೆ ವಲಯದ ಬಹುತೇಕ ರೈಲ್ವೆ ಮಾರ್ಗ ವಿದ್ಯುದೀಕರಣ ಮತ್ತು ದ್ವಿಪಥ ಹೊಂದಿರುವುದು ಸರಕು ಸಾಗಣೆಗೆ ಹೆಚ್ಚಿನ ಅನುಕೂಲವಾಗಿದೆ.

  • ದಕ್ಷಿಣ ಮಧ್ಯ ರೈಲ್ವೆ ಸರಕು ಸಾಗಣೆಯಲ್ಲಿ ಗಣನೀಯ ಸಾಧನೆ ಮಾಡುವಲ್ಲಿ ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯಲ್ಲಿನ ಆರ್‌ಟಿಪಿಎಸ್, ವೈಟಿಪಿಎಸ್, ಬಿಟಿಪಿಎಸ್‌ಗೆ ಕಲ್ಲಿದ್ದಲು ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಮಾಡಿರುವುದು ಕಾರಣವಾಗಿದೆ. 100 ದಶಲಕ್ಷ ಮೆಟ್ರಿಕ್ ಟನ್ ಸರಕು ಸಾಗಣೆಯಲ್ಲಿ ಅರ್ಧದಷ್ಟು ಕಲ್ಲಿದ್ದಲು ಸಾಗಣೆಯಿದೆ. ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಪ್ರತಿನಿತ್ಯ ಎಂಟತ್ತು ರೇಕ್ ಕಲ್ಲಿದ್ದಲು ಸರಬರಾಜು ಮಾಡಲಾಗುತ್ತಿದ್ದು, ಕಲ್ಲಿದ್ದಲು ಸಾಗಣೆಗೆ ರೈಲ್ವೆ ಇಲಾಖೆಯನ್ನು ಅವಲಂಬಿಸಲಾಗಿದೆ.

ರೈಲ್ವೆ ಸಚಿವಾಲಯದ ನೀತಿ, ಸುಧಾರಣೆಗಳು ಸರಕು ಸಾಗಣೆ ವಿಷಯದಲ್ಲಿ ವಲಯ ಅಸಾಧಾರಣ ಕಾರ್ಯಕ್ಷಮತೆ ತೋರಿಸಲು ಸಹಾಯ ಮಾಡಿವೆ. ಸರಕು ಸಾಗಣೆ ವಿಷಯದಲ್ಲಿ ಹೊಸ ಎತ್ತರವನ್ನು ನೋಂದಾಯಿಸಲು ವಲಯದ ಅಕಾರಿಗಳು, ಸಿಬ್ಬಂದಿ ಇದೇ ವೇಗವನ್ನು ಮುಂದುವರಿಸಲು ಸಲಹೆ ನೀಡಲಾಗಿದೆ. ಅರುಣಕುಮಾರ ಜೈನ್, ಪ್ರಧಾನ ವ್ಯವಸ್ಥಾಪಕ, ದಕ್ಷಿಣ ಮಧ್ಯ ರೈಲ್ವೆ, ಸಿಕಿಂದ್ರಾಬಾದ್. Oceanic Inspiration Winding veils round their heads, the women walked on deck. They were now moving steadily down the river, passing the dark shapes of ships at anchor, and London was a swarm of lights with a pale yellow canopy drooping above it. There were the lights of the great theatres, the lights of the long streets, lights that indicated huge squares of domestic comfort, lights that hung high in air. No darkness would ever settle upon those lamps, as no darkness had settled upon them for hundreds of years. It seemed dreadful that the town should blaze for ever in the same spot; dreadful at least to people going away to adventure upon the sea, and beholding it as a circumscribed mound, eternally burnt, eternally scarred. From the deck of the ship the great city appeared a crouched and cowardly figure, a sedentary miser.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net