ಸರಕಾರಿ ಯೋಜನೆಗಳ ಲಾಭ ಪಡೆಯಿರಿ

08ydg01
Published on

ಯಾದಗಿರಿ: ಕೈಗಾರಿಕಾಭಿವೃದ್ಧಿ ಹಾಗೂ ಸೇವಾ ವಲಯಗಳು ಆ ರಾಷ್ಟಗಳ ಆಥರ್ಿತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜಿಲ್ಲಾ ಕೌಶಲ ಅಭಿವೃದ್ಧಿ ಇಲಾಖೆ ಅಧಿಕಾರಿ ಪ್ರಭು ದೊರೆ ತಿಳಿಸಿದರು.
ವಡಿಗೇರಾ ಪಟ್ಟಣದ ಸಸರಕಾರಿ ಮೊರಾಜರ್ಿ ವಸತಿ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ನೀತಿ ಆಯೋಗದ ಮಹತ್ವಕಾಂಕ್ಷಿ ತಾಲೂಕು ಸಂಕಲ್ಪ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಆಥರ್ಿಕ ಸ್ವಾವಲಂಬನೆ ಸಾಧಿಸಬೇಕಾದರೆ ಸ್ವ-ಸಹಾಯ ಸಂಘಗಳ ರಚನೆ ಮಾಡಿಕೊಂಡು ಸಣ್ಣ ಪ್ರಮಾಣದ ಉಳಿತಾಯ ಕೈಗೊಳ್ಳುವುದು ಹಾಗೂ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳುವುದು ಅಗತ್ಯವಾಗಿದೆ ಎಂದು ಸಲಹೆ ನೀಡಿದರು.

ವಡಗೇರಾ ತಾಲೂಕು ನೀತಿ ಆಯೋಗದಿಂದ ಮಹತ್ವಕಾಂಕ್ಷಿ ಬ್ಲಾಕ್ ಎಂದು ಘೋಷಣೆಯಾಗಿದೆ. ಆರೋಗ್ಯ, ಶಿಕ್ಷಣ, ಕೃಷಿ, ಮಹಿಳಾ ಸಬಲೀಕರಣದ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಕೋಡುವುದು ಅತ್ಯಂತ ಪ್ರಮುಖವಾದುದಾಗಿದ್ದು, ಮಹಿಳೆಯರು ಮತ್ತು ನಿರುದ್ಯೋಗಿ ಯುವಕ, ಯುವತಿಯರು ಸಕರ್ಾರಿಂದ ಅನುಷ್ಟಾನಗೊಳ್ಳುತ್ತಿರುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳಲ್ಲಿ ಹಲವು ಮಹಿಳೆಯರು ಪಾಲ್ಗೊಂಡಿದ್ದು, ಪ್ರತಿಯೊಬ್ಬರು ಆದಾಯ ಆಧಾರಿತ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ತಮ್ಮ ಆಥರ್ಿಕತೆ ಸುಧಾರಿಸುವಲ್ಲಿ ಮುಂದಾಗಬೇಕು. ಜತೆಗೆ ಮಕ್ಕಳ ಶಿಕ್ಷಣ ಹಾಗೂ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಸಕರ್ಾರಿಂದ ದೊರೆಯುವ ಸೌಲಭ್ಯ ಪಡೆದುಕೊಳ್ಳಬೇಕು. ಇತ್ತೀಚೆಗೆ ಹೊಸದಾಗಿ ಜಾರಿಗೆ ತರಲಾದ ಪಿಎಂ ವಿಶ್ವಕರ್ಮ ಯೋಜನೆಗೆ ಹೆಚ್ಚಿನ ಪ್ರಮಾಣದಲ್ಲಿ ಅಜರ್ಿ ಸಲ್ಲಿಸುವಂತೆ ಕಿವಿಮಾತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net