ಸರಕಾರದ ಹಣಕಾಸಿನ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ

13ydg03
Published on

ಯಾದಗಿರಿ: ಗ್ಯಾರಂಟಿ ಭಾಗ್ಯದ ಪರಿಣಾಮ ರಾಜ್ಯದೆಲ್ಲಡೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದ್ದು, ಹೆಸ್ಕಾಂಗೆ ವಿದ್ಯುತ್ ಖರೀದಿ ಮಾಡಲು ದುಡ್ಡಿಲ್ಲದ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಕಳೆದ ತಿಂಗಳು ರಾಜ್ಯದಲ್ಲಿನ ನ್ಯಾಯಾಧೀಶರಿಗೆ ಎಂಟು ದಿನ ತಡಮಾಡಿ ಸಂಬಳ ನೀಡಲಾಗಿದೆ. ಸರಕಾರಿ ನೌಕರರಿಗೆ 17 ದಿನ ತಡಮಾಡಿ ವೇತನ ಪಾವತಿ ಮಾಡಲಾಗಿದೆ. ಸರಕಾರದ ಅಧಿಕಾರಕ್ಕೆ ಬಂದು ಕೇವಲ ನಾಲ್ಕೈದು ತಿಂಗಳಲ್ಲೇ ಹಣಕಾಸಿನ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಇನ್ನೂ ನಾಲ್ಕುವರೆ ವರ್ಷ ಏನಾಗಬಹುದು? ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಮೈಸೂರು ನಾಡ ದೇವತೆ ಚಾಮುಂಡಿಯ ಪವಿತ್ರ ಸ್ಥಳ. ಹಿಂದೆ ಮಹಾರಾಜರ ಕಾಲದಲ್ಲಿ ಚಾಮುಂಡಿಯ ಆಶೀವರ್ಾದ ಪಡೆದು ದಸರಾ ಉತ್ಸವ ಆಚರಣೆ ಮಾಡುತ್ತಿದ್ದರು. ಆ ಪರಂಪರೆಯನ್ನ ಯಾವುದೇ ಪಕ್ಷ ಅಧಿಕಾರ ಬಂದರೂ ಮುಂದುವರೆಸುತ್ತ ಬಂದಿದೆ. ಆದರೆ, ಕೆಲ ಸಂಘಟನೆಗಳು ದಸರಾ ಉತ್ಸವ ವಿರೋಧಿಸುತ್ತಿವೆ. ದೇಶದಲ್ಲಿನ ಪಾರಂಪರಿಕ ಉತ್ಸವಗಳನ್ನು ವಿಕೃತಿಯಾಗಿ ಪ್ರತಿಬಿಂಬಿಸುವ ವ್ಯವಸ್ಥಿತ ಸಂಚು ನಡೆಯುತ್ತಿದ್ದು, ಮೈಸೂರಿನ ಮಹಿಷಾಸುರ ಉತ್ಸವ ಆಚರಣೆ ಒಂದಾಗಿದೆ ಎಂದರು.

ಭಾರತೀಯ ಹಿಂದು ಸಂಸ್ಕೃತಿಗೆ ಅಪಮಾನ ಮಾಡಬೇಕು ಎಂದೇ ಕೆಲ ಸಂಘಟನೆಗಳು ಹುಟ್ಟಿಕೊಂಡಿವೆ. ಸಿದ್ದರಾಮಯ್ಯರ ಸರಕಾರದಬಂದಮೇಲೆ ಯಾವುದೇ ರೀತಿಯ ಬಿಗಿ ಕ್ರಮ ಇಲ್ಲ. ಶಿವಮೊಗ್ಗ ಗಲಾಟೆ ವಿಚಾರದಲ್ಲಿ ಔರಂಗಜೇಬ್ ಹಾಗೂ ಆತನ ಕತ್ತಿಯನ್ನು ವೈಭವೀಕರಿಸಲಾಯಿತು. ಹಿಂದು ಹೆಣ್ಣು ಮಕ್ಕಳ ಮೇಲೆ ಹಲ್ಲೆಗಳು ನಡೆದವು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net