ಸರ್ಕಾರದ ಮೇಲೆ ಜನರಿಗೆ ಹೆಚ್ಚಿನ ವಿಶ್ವಾಸ

Sriramnagar BJP Join
ಗಂಗಾವತಿ ತಾಲೂಕಿನ ಶ್ರೀರಾಮನಗರದ ಸಮುದಾಯ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಬಸವರಾಜ ದಢೇಸೂಗೂರು ಸಮ್ಮುಖದಲ್ಲಿ ಬಿಜೆಪಿ ಸೇರಿದರು.
Published on

ಗಂಗಾವತಿ: ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಾಗುತ್ತಿದ್ದು, ಕಾಂಗ್ರೆಸ್ ಸೇರಿ ವಿವಿಧ ಪಕ್ಷಗಳ ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

ಶ್ರೀರಾಮನಗರದ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಲವು ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿದ್ದ ಗ್ರಾಪಂ ಮಾಜಿ ಸದಸ್ಯ ವಿಜಯಭಾಸ್ಕರ್ ರಡ್ಡಿ, ಕಾಶೀಮಪ್ಪ ನೇತೃತ್ವದ ಬೆಂಬಲಿಗರು ಬಿಜೆಪಿ ಸೇರಿದರು.

ಬಿಜೆಪಿ ಮುಖಂಡರಾದ ಸತ್ಯನಾರಾಯಣ ದೇಶಪಾಂಡೆ, ಪಾಪಾರಾವ್, ಅನ್ನೆ ಚಂದ್ರಶೇಖರ್, ವೆಂಕಟಕೃಷ್ಣ, ದುರುಗೇಶ ಹೊಸ್ಕೇರಾ, ಕಿಲಾರಿ ರಾಮು, ಎಂ.ಜೆ.ರವಿಕುಮಾರ, ಗೋಪಿಚಂದ್, ಸುಂಕಣ್ಣ,ರಾಮುಪವಾರ್ ಆರ್.ವೆಂಕಟೇಶ, ಗೋಪಿ ಅಕ್ಕಿನ್, ಕೃಷ್ಣಪ್ಪ ನೆಟ್‌ಕಲ್ ಇತರರಿದ್ದರು. ಗಂಗಾವತಿ ಬಿಜೆಪಿ ಕಚೇರಿಯಲ್ಲಿ ಶಾಸಕ ಪರಣ್ಣಮುನವಳ್ಳಿ ಸಮ್ಮುಖದಲ್ಲಿ ಗಂಗಾವತಿಯ ಯುವಕರು ಮತ್ತು ರಾಂಪುರದ ವಿವಿಧ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net