ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವು ಅಗತ್ಯ

30 SARAG 1
ಸರಗೂರು ತಾಲೂಕಿನ ಹಾದನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಮಾಜ ಸೇವಕ ಮಡುವಿನಹಳ್ಳಿ ಮಂಟೆಲಿಂಗಾಚಾರಿ ಅವರನ್ನು ಸನ್ಮಾನಿಸಲಾಯಿತು. ಶಾಂತಮ್ಮ, ಮಹೇಂದ್ರ, ಶಿವು, ನಂಜುಂಡಸ್ವಾಮಿ ಇದ್ದರು.
Published on

ಸರಗೂರು: ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಶಾಲೆಗಳನ್ನು ಸಜ್ಜುಗೊಳಿಸಬೇಕು. ಶಾಲೆಗಳಲ್ಲಿ ಹೊಸತನ ಮೂಡಿಸುವ ಕೆಲಸ ಶಿಕ್ಷಕರಿಂದ ಆಗಬೇಕು. ಇದಕ್ಕೆ ದಾನಿಗಳ ನೆರವು ಅಗತ್ಯ ಎಂದು ಸಮಾಜ ಸೇವಕ ಮಡುವಿನಹಳ್ಳಿ ಮಂಟೆಲಿಂಗಾಚಾರಿ ಅಭಿಪ್ರಾಯಪಟ್ಟರು.

ತಾಲೂಕಿನ ಹಾದನೂರು ಗ್ರಾಪಂ ವ್ಯಾಪ್ತಿಯ ಹಾದನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ನಲಿಕಲಿ ಟೇಬಲ್ ಹಾಗೂ ಚೇರ್‌ಗಳನ್ನು ವಿತರಿಸಿ ಮಾತನಾಡಿ, ದಾನಿಗಳು ನೀಡುವ ಸಲಕರಣೆ ಸಮರ್ಪಕವಾಗಿ ಬಳಕೆಯಾಗಬೇಕು. ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಶಾಲೆಯ ಮುಖ್ಯಶಿಕ್ಷಕಿ ಶಾಂತಮ್ಮ ಮಾತನಾಡಿದರು. ಗ್ರಾಮದ ಮುಖಂಡರಾದ ಸಾಯಿ ಕೃಷ್ಣಮೂರ್ತಿ, ಶಿವಮೂರ್ತಿ, ರಾಜಯ್ಯ, ಮಹೇಂದ್ರ, ಶಿವು, ನಂಜುಂಡಸ್ವಾಮಿ, ಪಾಪಣ್ಣ, ಹೊಂಬಳಮ್ಮ, ಸ್ವಾಮಿ, ಶಿಕ್ಷಕರಾದ ಪ್ರಸನ್ನ ಕುಮಾರ್, ಕೃಷ್ಣಮೂರ್ತಿ, ಗೌರೀಶ್, ಸಿದ್ದರಾಜು, ಹೇಮಾವತಿ, ಸಿದ್ದಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net