ಸಮ್ಮೋಹನಗೊಂಡ ರೈಡಿಂಗ್ ಉತ್ಸಾಹಿಗಳು

YAMAHA
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ದೇಶದಲ್ಲಿ ದ್ವಿಚಕ್ರ ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಇಂಡಿಯಾ ಯಮಹಾ ಮೋಟರ್ ಪ್ರೖೆವೇಟ್ ಲಿಮಿಟೆಡ್ (ಐವೈಎಂ) ಹುಬ್ಬಳ್ಳಿಯಲ್ಲಿ ಭಾನುವಾರ ವೀಕೆಂಡ್ ಕಾರ್ಯಕ್ರಮವಾದ ದಿ ಕಾಲ್ ಆಫ್ ದಿ ಬ್ಲ್ಯೂ ಆಯೋಜಿಸಿತ್ತು. ಯಮಹಾದ ಸುಮಾರು 400 ಉತ್ಸಾಹಿ ಅಭಿಮಾನಿಗಳು ಮತ್ತು ಬೈಕ್ ರೈಡರ್​ಗಳು ಪಾಲ್ಗೊಂಡಿದ್ದರು.

ಅಭಿಮಾನಿಗಳು ಮತ್ತು ಸವಾರರು ಬ್ರ್ಯಾಂಡ್​ನ ಪ್ರೀಮಿಯಂ ದ್ವಿಚಕ್ರ ವಾಹನಗಳ ಅತ್ಯಾಧುನಿಕ ತಂತ್ರಜ್ಞಾನ, ಕಾರ್ಯಕ್ಷಮತೆ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ತಿಳಿದುಕೊಂಡರು. ಜಿಮ್ಾನಾ ರೈಡರ್ ಮತ್ತು ವುಡನ್ ಪ್ಲಾಂಕ್ ಚಾಲೆಂಜ್ ಸಂಸ್ಥೆಗಳ ಬೈಕ್ ರೈಡರ್​ಗಳು ರೈಡಿಂಗ್ ಕೌಶಲಗಳನ್ನು ಪ್ರದರ್ಶಿಸಿದರು. ಬೈಕ್ ಚಾಲನೆ ವೇಳೆ ತೆಗೆದುಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಲಾಯಿತು.

ಇದೇ ವೇಳೆ ಯಮಹಾ ಕಂಪನಿಯ ಅತ್ಯಂತ ನೆಚ್ಚಿನ ಬೈಕ್​ಗಳನ್ನು ಪ್ರದರ್ಶಿಸಲಾಯಿತು. ಸೂಪರ್ ಸ್ಪೋರ್ಟ್ಸ್ ಆರ್3 ಮತ್ತು ಹೈಪರ್ ನೆಕೆಡ್ ಎಂಟಿ- 03 ಬೈಕ್​ಗಳನ್ನು ವೀಕ್ಷಿಸಿದ ರೈಡಿಂಗ್ ಉತ್ಸಾಹಿಗಳು ಸಮ್ಮೋಹನಗೊಂಡರು.

ಬೈಕರ್ಸ್ ಕೆಫೆಯಲ್ಲಿ ಬೈಕ್ ಪ್ರಿಯರು ವಿಶೇಷ ಬ್ರ್ಯಾಂಡ್​ಗಳು, ರೈಡಿಂಗ್​ಗೆ ಅಗತ್ಯವಾದ ಉಡುಪುಗಳನ್ನು ವೀಕ್ಷಿಸಿದರು. ಗೇಮಿಂಗ್ ಜೋನ್​ನಲ್ಲಿ ಮೋಟೋಜಿಪಿ ರೈಡ್ ಮಾಡುವ ಮೂಲಕ ರೋಮಾಂಚಕಾರಿ ಅನುಭವವನ್ನು ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net