

ಕುಕನೂರು: ರಾಜೂರು ಗ್ರಾಮದಲ್ಲಿ ನಡೆಯುವ ದ್ವಿತೀಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲ್ಲರೂ ಒಗ್ಗೂಡಿ ಯಶಸ್ವಿಗೊಳಿಸೋಣ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ಮಸಬಹಂಚಿನಾಳ ಗ್ರಾಮದ ಅವರ ಕಚೇರಿಯಲ್ಲಿ ಗುರುವಾರ ಸಮ್ಮೇಳನದ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದರು. ಕನ್ನಡ ಭಾಷೆ ನಮ್ಮ ಅಸ್ಮಿತೆ. ಪರಭಾಷೆಯ ಹಾವಳಿಯಿಂದ ನಾಡಿನ ಭಾಷೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಕನ್ನಡಿಗರ ಕರ್ತವ್ಯವಾಗಿದೆ. ನುಡಿ ಜಾತ್ರೆಯಲ್ಲಿ ನೆಲ, ಜಲ ಮತ್ತು ಭಾಷೆಯ ಅಭ್ಯುದಯಕ್ಕೆ ಶ್ರಮಿಸಬೇಕು. ಗ್ರಾಮೀಣ ಭಾಗದ ಜನರಲ್ಲಿ ಅಕ್ಷರ ಜಾತ್ರೆ ಕುರಿತು ಜಾಗೃತಿ ಮೂಡಿಸಬೇಕು. ಹಿರಿಯ ಸಾಹಿತಿ ಆರ್.ಪಿ.ರಾಜೂರು ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನ ಅಚ್ಚುಕಟ್ಟಾಗಿ ನಡೆಯಲಿ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಕಳಕಪ್ಪ ಕುಂಬಾರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹೇಶ ಸಬರದ, ಪ್ರಮುಖರಾದ ಜಾಕೀರ ಹುಸೇನ್ ಕುಕುನೂರ, ಬಸವರಾಜ ಮೇಟಿ, ಸುರೇಶ ಅಬ್ಬಿಗೇರಿ, ಮಾರುತಿ ತಳವಾರ, ಈಶಪ್ಪ ಮಳಗಿ, ಬಸವರಾಜ ಬಿನ್ನಾಳ, ಲಕ್ಷ್ಮಣ ಹಿರೇಮನಿ, ಪೀರ್‌ಸಾಬ್ ದಫೇದಾರ, ಬಸವರಾಜ ಕೂಡ್ಲಿ, ಚಂದ್ರಪ್ಪ ರಾಜೂರು, ಹುಚ್ಚೀರಪ್ಪ ಶಿವರಡ್ಡಿ, ಅಮರೇಶ ಶಿವರಡ್ಡಿ ಇತರರಿದ್ದರು.