ದಾವಣಗೆರೆ: ಮಹಿಳಾ ಸಮನ್ವಯ ಕರ್ನಾಟಕ ಪ್ರಾಂತ, ಶಿವಮೊಗ್ಗ ವಿಭಾಗ ಹಾಗೂ ಸೇವಾ ಭಾರತಿ ಟ್ರಸ್ಟ್‌ನ ಸಹಯೋಗದಲ್ಲಿ ಆಯೋಜಿಸಿರುವ ‘ನಾರಿಶಕ್ತಿ ಸಂಗಮ’ ಮಹಿಳಾ ಸಮ್ಮೇಳನ ಹಿನ್ನೆಲೆಯಲ್ಲಿ ನಗರದಲ್ಲಿ ಶುಕ್ರವಾರ ಮಹಿಳಾ ಬೈಕ್ ರ‌್ಯಾಲಿ ನಡೆಯಿತು.
ನಿಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನ ಆವರಣದಿಂದ ಎಚ್‌ಕೆಆರ್ ವೃತ್ತ, ನಿಟುವಳ್ಳಿ ಮುಖ್ಯರಸ್ತೆ, ಶಿವಪ್ಪಯ್ಯ ವೃತ್ತ, ತ್ರಿಶೂಲ್ ಚಿತ್ರಮಂದಿರ ರಸ್ತೆ, ಬಂಬೂ ಬಜಾರ್, ಹಳೇ ಬೇತೂರು ರಸ್ತೆ, ಹಾಸಭಾವಿ ವೃತ್ತದ ಮೂಲಕ ನಗರದೇವತೆ ದುರ್ಗಾಂಬಿಕಾ ದೇವಸ್ಥಾನದವರೆಗೆ ರ‌್ಯಾಲಿ ನಡೆಯಿತು.
ಸಮ್ಮೇಳನದ ಅಧ್ಯಕ್ಷೆ, ಹಿರಿಯ ಪ್ರಸೂತಿ ತಜ್ಞೆ ಡಾ.ಶಾಂತಾಭಟ್ ರ‌್ಯಾಲಿಗೆ ಚಾಲನೆ ನೀಡಿದರು. ಸಮ್ಮೇಳನದ ಸಂಚಾಲಕಿ ಸುಧಾ ಜಯರುದ್ರೇಶ್, ಸಹ ಸಂಚಾಲಕಿ ಶೋಭಾ ಕೊಟ್ರೇಶ್, ಸಹನಾ ಮಂಜುನಾಥ್, ಜಯಮ್ಮ, ಲತಾ ಲೋಕಿಕೆರೆ ನಾಗರಾಜ್, ಸರೋಜಾ ದೀಕ್ಷಿತ್, ಮಂಜುಳಾ ಮಹೇಶ್, ಪುಷ್ಪಾ ವಾಲಿ ಇತರರು ಪಾಲ್ಗೊಂಡಿದ್ದರು.