'ಸಮ್ಮೇದ್​ ಶಿಖರ್ಜಿ' ಕೇಂದ್ರವನ್ನು ತೀರ್ಥ ಕ್ಷೇತ್ರವೆಂದು ಘೋಷಿಸಲು ಒತ್ತಾಯಿಯಿಸಿ ಪ್ರತಿಭಟನೆ

01GDG01
Published on

ಗದಗ
ಜೈನ ಸಮುದಾಯದ ಪವಿತ್ರ ಯಾತ್ರಾಸ್ಥಳ ಜಾರ್ಖಂಡ್​ ರಾಜ್ಯದ "ಸಮ್ಮೇದ್​ ಶಿಖಜಿರ್' ಕೇಂದ್ರವನ್ನು ತೀರ್ಥ ಕ್ಷೇತ್ರವೆಂದು ಸರ್ಕಾರ ಘೋಷಿಸಬೇಕೆಂದು ಆಗ್ರಹಿಸಿ ನಗರದ ಗಾಂಧಿ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಹಿಂದೂ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಬಸವಂತೆಪ್ಪ ದಾನಪ್ಪಗೌಡರ್​, ಸಮ್ಮೇದ್​ ಶಿಖರ್ಜಿ' ಯನ್ನು ಜೈನ ಸಮಾಜದ ಪವಿತ್ರ ಧಾಮಿರ್ಕ ಹಾಗೂ ಶಾಶ್ವತ ತೀರ್ಥಕ್ಷೇತ್ರ ಎಂದು ಪರಿಗಣಿಸಲಾಗಿದೆ. ಜೈನ ತತ್ವಶಾಸ್ತ್ರದ ಪ್ರಕಾರ 24 ತೀರ್ಥಂಕರಲ್ಲಿ 20 ತೀರ್ಥಂಕರರು ಈ ಸಮ್ಮೇದ್​ ಶಿಖಜಿರ್' ಪರ್ವತದಲ್ಲಿ ಆಧ್ಯಾತ್ಮಿಕ ಸಾಧನೆ ಮಾಡುವ ಮೂಲಕ ಮೋಕ್ಷವನ್ನು ಪಡೆದರು. ಅದಕ್ಕಾಗಿಯೇ ಜೈನರು ಈ ಯಾತ್ರೆಯ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾರೆ. ಇತ್ತೀಚೆಗೆ, ಜಾರ್ಖಂಡ್​ ಸರ್ಕಾರವು ಪ್ರವಾಸೋದ್ಯಮವನ್ನು ಹೆಚ್ಚಿಸುವ ಹಿನ್ನೆಲೆ ವಾಣಿಜ್ಯ ಉದ್ದೇಶಕ್ಕಾಗಿ ಈ ಪವಿತ್ರ ಪ್ರದೇಶವನ್ನು ಅಭಿವೃದ್ಧಿಪಡಿಸಲು ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು. ಅದರ ನಂತರ, ಜೈನ ಸಮಾಜದ ತೀವ್ರ ಆಂದೋಲನದ ಮೇಲೆ, ಕೇಂದ್ರ ಸರ್ಕಾರವು 2019 ರಲ್ಲಿ ಈ ಸಂಬಂಧ ನೀಡಲಾದ ಹಲವಾರು ಮಾಹಿತಿಯ ಮೂಲಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಹಿಂದೂ ಜನಜಾಗೃತಿ ಸಮಿತಿ ಸ್ವಾಗತಿಸುತ್ತದೆ. ಜೈನ ಸಮಾಜದ ದೃಷ್ಟಿಯಿಂದ ಈ ಸ್ಥಳವು ಬಹಳ ಮಹತ್ವದ್ದಾಗಿದೆ. ಹಿಂದೂ ಸಮಾಜಕ್ಕೆ ಅಯೋಧ್ಯೆ, ಮಥುರಾ, ಕಾಶೀ ಹೇಗೆ ಮುಖ್ಯಯೋ, ಅದೇ ರೀತಿಯಲ್ಲಿ ಸಮ್ಮೇದ್​ ಶಿಖಜಿರ್ ದೇಗುಲವು ಜೈನ ಸಮುದಾಯಕ್ಕೆ ಧಾಮಿರ್ಕ ಮಹತ್ವವನ್ನು ಹೊಂದಿದೆ. ಹಾಗಾಗಿ ಕೇಂದ್ರ ಸರ್ಕಾರ ಈ ಕ್ಷೇತ್ರವನ್ನು ತೀರ್ಥ ಸ್ಥಳ' ಎಂದು ಘೋಷಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಜಯಶ್ರೀ ಹೆಬಸೂರು ಮತ್ತು ಇತರರು ಇದ್ದರು.

ಬಾಕ್ಸ್​:
ಶ್ರೀರಾಮನ ಅಪಮಾನ ಮಾಡಿದ ಕೆ.ಎಸ್​. ಭಗವಾನ್​ ನನ್ನು ಕೂಡಲೇ ಬಂಧಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಇದೇ ಸಂದರ್ಭದಲ್ಲಿ ಆಗ್ರಹಿಸಿತು. ಶ್ರೀರಾಮನ ವಿರುದ್ಧ ಅತ್ಯಂತ ಕೀಳು ಮಟ್ಟದ ಪದಬಳಕೆ ಮಾಡಿದ್ದಾರೆ. ಈ ಹಿಂದೆಯೂ ಭಗವಾನ್​ ಇದೇ ರೀತಿಯ ಹೇಳಿಕೆ ನೀಡಿದ್ದರಿಂದ ಹಲವು ಕಡೆ ಪ್ರಕರಣ ದಾಖಲಾಗಿ, ಇಂತಹ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡದಂತೆ ಷರತ್ತು ವಿಧಿಸಲಾಗಿತ್ತು. ಆದರೆ ಷರತ್ತಿನ ಉಲ್ಲಂನೆ ಮಾಡಿ ಮತ್ತೊಮ್ಮೆ ಅಪರಾಧ ಮಾಡಿದ್ದಾರೆ. ಆದ್ದರಿಂದ ಜಾಮೀನು ರದ್ದುಗೊಳಿಸಿ ಹಿಂದೂ ದ್ವೇಷಿ ಭಗವಾನ್​ ರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net