ಸಮ್ಮೇದ ಶಿಖರಜಿ ಉಳಿಸಲು ಜೈನ್ ಸಮುದಾಯ ಆಗ್ರಹ

1671622929080
Published on

ವಿಜಯಪುರ: ಜಾರ್ಖಂಡ ರಾಜ್ಯದ ಗಿರಡಿಯಾ ಜಿಲ್ಲೆಯಲ್ಲಿರುವ ಪಾರ್ಶ್ವನಾಥ ಪರ್ವತ(ಸಮ್ಮೇದ ಶಿಖರಜಿ) ಪವಿತ್ರ 20 ತೀರ್ಥಂಕರರು ಮೋಕ್ಷ ಹೊಂದಿರುವ ಪವಿತ್ರ ಸ್ಥಳವಾಗಿದೆ. ಇಂತಹ ಸ್ಥಳವನ್ನು ಜಾರ್ಖಂಡ್ ಸರಕಾರವು ಪ್ರವಾಸಿ ತಾಣ ವನ್ನಾಗಿ ಮಾಡಿದ್ದು , ಈ ಕುರಿತು ಆದೇಶವನ್ನು ಹೊರಡಿಸಿದೆ . ಇದರಿಂದ ಪಾರ್ಶ್ವನಾಥ ಪರ್ವತ್(ಸಮ್ಮೇದ ಶಿಖರಜಿ) ದ ಪಾವಿತ್ರ್ಯತೆ ಹಾಳಾಗುತ್ತಿದ್ದು , ಅದನ್ನು ಪಾರ್ಶ್ವನಾಥ ಎಕೋ ಸೆನ್ಸಲ್ಟಿಜೋನನ್ನು ರದ್ದು ಗೊಳಿಸಲು ಆಗ್ರಹಿಸಲಾಯಿತು. ವಿಜಯಪುರ ನಗರದ ಸಂಪೂರ್ಣ ಜೈನ್ ಸಮಾಜದ ವತಿಯಿಂದ ಎಲ್.ಬಿ.ಎಸ್ . ಮಾರುಕಟ್ಟೆ ಹಿಂದುಗಡೆ ಇರುವ ಜಗವಲ್ಲಬ ಜೈನ್‌ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಶಾಂತ ರೀತಿಯಿಂದ ಮೌನವಾಗಿ ಪಾದಯಾತ್ರೆ ಮಾಡಲಾಯಿತು. ಈ ಮೂಲಕ ಜಾರ್ಖಂಡ್ ಸರಕಾರದ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯಪಾಲಕರಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಮುಖೇನ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ  ಜೈನ್ ಸಮಾಜದ ಮುಖಂಡರಾದ ಪ್ರವೀಣ ಕಾಸರ, ಡಾ.ಕಿರಣ ಓಸ್ವಾಲ್, ಶೈಲೇಶ ಶಹಾ, ನಿಹಾಲಚಂದ ಪೋರವಾಲ, ದಯಾಲಾಲಜಿ ವಾಣಿಗೊಟಾ, ಬಾಬು ಅನಾಜೆ, ಜಂಬುಕುಮಾರ ಬಾಗೇವಾಡಿ, ಪ್ರಕಾಶ ಗೋಗಡಿ, ಸಂತೋಷ ಕವಟೇಕರ, ಸಂಜೀವ ಬಾಗೇವಾಡಿ, ಪ್ರವೀಣ ಕೇಸಿ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net