

ಕೆ.ಎಂ.ದೊಡ್ಡಿ: ಇಲ್ಲಿನ ಸಮೃದ್ಧಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಶೆಟ್ಟಹಳ್ಳಿ ಮರಿಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಬಿದರಹಳ್ಳಿ ಸುಂದರ್ ಅವಿರೋಧ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ತಲಾ ಒಬ್ಬೊಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ಬಳಿಕ ಅಧ್ಯಕ್ಷ ಕೆ.ಶೆಟ್ಟಹಳ್ಳಿ ಮರಿಸ್ವಾಮಿ ಹಾಗೂ ಉಪಾಧ್ಯಕ್ಷ ಬಿದರಹಳ್ಳಿ ಸುಂದರ್ ಅವರನ್ನು ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಕೆ. ಶೆಟ್ಟಹಳ್ಳಿ ಮರಿಸ್ವಾಮಿ, ಸಹಕಾರ ಸಂಘದಿಂದ ಷೇರುದಾರರಿಗೆ ಹಲವು ಯೋಜನೆಗಳನ್ನು ರೂಪಿಸಿ ಸಂಘದ ಬೆಳವಣಿಗೆಗೆ ಶಕ್ತಿಮೀರಿ ದುಡಿಯಲಿದ್ದು, ಆಡಳಿತ ಮಂಡಳಿ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಸಂಘದ ಸರ್ವತೋಮುಖ ಬೆಳವಣಿಗೆ ದುಡಿಯಲಿದ್ದೇನೆ ಎಂದು ಭರವಸೆ ನೀಡಿದರು.
ಸದಸ್ಯರಾದ ಸಿದ್ದಲಿಂಗಯ್ಯ, ವೆಂಕಟೇಶ್, ಜವರಾಯಿಗೌಡ ಜೈಲಿಂಗೇಗೌಡ, ಪ್ರಸಾದ್, ಗೋವಿಂದರಾಜು, ರಂಗಸ್ವಾಮಿ, ಮರಿಸ್ವಾಮಿ, ಅಭಿಜಿತ್, ಮಂಗಳಗೌರಿ, ಸುನೀತಾ ಇದ್ದರು.