ಸಮೂಹ ಸಾರಿಗೆಗೆ ಇರಲಿ ಆದ್ಯತೆ,ಜಿಲ್ಲಾಧಿಕಾರಿ ವೆಂಕಟೇಶ್

LED vehicle-1-008
Published on


ಚಿತ್ರದುರ್ಗ: ವಾಯು,ಪರಿಸರ ಮಾಲಿನ್ಯ ತಡೆ ಹಾಗೂ ರಸ್ತೆ ಸಂಚಾರ ನಿಯಮಗಳ ಪಾಲನೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಸಾರಿಗೆ ಇ ಲಾಖೆ,ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾದ್ಯಂತ ಎಲ್‌ಇಡಿ ವಾಹನದ ಮೂಲಕ ಹಮ್ಮಿಕೊಂಡಿರುವ ಪ್ರಚಾರ ಕಾರ್ಯಕ್ಕೆ ಜಿಲ್ಲಾ ಧಿಕಾರಿ ಟಿ.ವೆಂಕಟೇಶ್ ಮಂಗಳವಾರ ಡಿಸಿ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಪೆಟ್ರೋಲ್ ಇತ್ಯಾದಿ ಅತಿಯಾದ ಇಂಧನಗಳ ಬಳಕೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಗಾಳಿ ಗುಣಮಟ್ಟ ಕಡಿಮೆಯಾಗುತ್ತಿದೆ. ಸಾಂಪ್ರದಾಯಿಕ ಇಂಧನಗಳ ಬದಲಿಗೆ ಎಲೆಕ್ಟ್ರಿಕಲ್ವಾಹನ ಹಾಗೂ ಸಮೂಹ ಸಾರಿಗೆ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಸ ಪ್ತಾಹ ಆಚರಿಸಲಾಗುತ್ತಿದೆ ಎಂದು ಡಿಸಿ ಹೇಳಿದರು.
ಜೀವದ ರಕ್ಷಣೆಗೆ ಸಂಚಾರ ನಿಯಮಗಳ ಪಾಲನೆ ಮುಖ್ಯ.ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು,ಕಾರು ಪ್ರಯಾಣಿಕರು ಸೀಟ್‌ಬೆಲ್ಟ್ ಬಳಸಬೇಕು. ಸಂಚಾರ ನಿಯಮಗಳನ್ನು ಪಾಲನೆಯಿಂದ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದ್ದು, ಸಮೂಹ ಸಾರಿಗೆಗೆ ಆದ್ಯತೆ ನೀಡ ಬೇಕಿದೆ ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ ಎಂ.ಕಾಳಿಸಿಂಗೆ ಮಾತನಾಡಿ,ಎಲ್‌ಇಡಿ ವಾಹನ ಜಿಲ್ಲೆಯಾದ್ಯಂತ ಸಂಚರಿಸಲಿದೆ. ಇಲಾಖೆಯಿಂ ದ 6 ಕಿರುಚಿತ್ರಗಳನ್ನು ನಿರ್ಮಿಸಲಾಗಿದೆ. ಜಾತ್ರೆ,ಸಂತೆ,ಪಟ್ಟಣ,ನಗರ ಸೇರಿದಂತೆ ಜನದಟ್ಟಣೆ ಸ್ಥಳಗಳಲ್ಲಿ ಕಿರುಚಿತ್ರಗಳನ್ನು ಪ್ರದರ್ಶಿಸಲಾ ಗುವುದು ಎಂದರು.
ಎಸ್‌ಪಿ ಧರ್ಮೇಂದರ್‌ಕುಮಾರ್‌ಮೀನಾ,ಸಾರಿಗೆ ಇಲಾಖೆ ಅಧೀಕ್ಷಕ ಸಿ.ಡಿ.ಹೇಮಂತ್‌ಕುಮಾರ್,ವಾಹನ ನಿರೀಕ್ಷಕರಾದ ಶಾನುಭಾ ಗ್,ಪ್ರಕಾಶ್,ಲೋಕೋಪಯೋಗಿ ಇಲಾಖೆಯ ರಾಜೇಶ್,ಪ್ರಸನ್ನ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net