

ಎಚ್.ಡಿ.ಕೋಟೆ: ತಾಲೂಕು ನಾಯಕರ ಕ್ಷೇಮಾಭಿವೃದ್ಧಿ ಸಂಘದ ಪೂರ್ವಭಾವಿ ಸಭೆಯನ್ನು ಪಟ್ಟಣದ ಅತಿಥಿ ಗೃಹದಲ್ಲಿ ತಾಲೂಕು ಅಧ್ಯಕ್ಷ ಕ್ಯಾತನಹಳ್ಳಿ ನಾಗರಾಜು ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಜನಾಂಗದ ಸಮಸ್ಯೆಗಳ ಬಗ್ಗೆ ಸಂಘದ ಪದಾಧಿಕಾರಿಗಳು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ರೈತರ ಸಮಸ್ಯೆಗಳನ್ನು ಪರಿಹರಿಸಿಕೊಡಲು ಮುಂದಾಗಬೇಕು. ಸಮಾಜದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಿಕ್ಷಣ, ಉದ್ಯೋಗ ಕ್ಷೇತ್ರದ ಮಾಹಿತಿ ನೀಡಬೇಕು ಎಂದು ನಾಗರಾಜು ಹೇಳಿದರು.
ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಶ್ರಮಿಸಿದ ಶ್ರೀ ಪ್ರಸನ್ನನಂದಾಪುರಿ ಸ್ವಾಮೀಜಿ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ಅಲ್ಲದೆ, ಶ್ರೀಗಳು ಕೈಗೊಳ್ಳುವ ಯಾವುದೇ ಹೋರಾಟದಲ್ಲಿ ಸಂಘದ ಪದಾಧಿಕಾರಿಗಳು ಬೆಂಬಲು ನೀಡಲು ನಿರ್ಧರಿಸಿದರು.
ಉಪಾಧ್ಯಕ್ಷ ಚಲುವಕೃಷ್ಣನಾಯಕ, ಪ್ರಧಾನ ಕಾರ್ಯದರ್ಶಿ ಜಿನ್ನಹಳ್ಳಿ ರಾಜನಾಯಕ, ಕಾರ್ಯದರ್ಶಿ ರವಿ, ಖಜಾಂಚಿ ನಾಗರಾಜು, ಸಂಘಟನಾ ಕಾರ್ಯದರ್ಶಿ ನಾಗರಾಜು, ನಿರ್ದೇಶಕರಾದ ನಾಗನಾಯಕ, ಸಿಂಗನಾಯಕ, ಜಯರಾಮನಾಯಕ, ದೇವಣ್ಣ, ನಿಂಗನಾಯಕ ಸುರೇಶ್, ಎಂ.ರವಿಶಂಕರ, ರವಿ, ರಾಜೇಂದ್ರ, ಚಂದ್ರು, ಲಾವಣ್ಯ, ಬೆಟ್ಟನಾಯಕ, ಗೋವಿಂದರಾಜು, ಸಣ್ಣಸ್ವಾಮಿನಾಯಕ, ಕುಮಾರ, ಬೆಟ್ಟನಾಯಕ, ರಾಮನಾಯಕ, ಬೆಟ್ಟನಾಯಕ, ಈರನಾಯಕ, ಚಿಕ್ಕಣ್ಣ, ದೇವನಾಯಕ, ಭೈರನಾಯಕ, ಮಹದೇವನಾಯಕ, ಉಮೇಶ್ ಇದ್ದರು.