ಸಮುದಾಯದ ಏಳಿಗೆಗೆ ಶ್ರಮಿಸಲಿ

25Kagavad1
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.28307292, 0.40033334);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;
Published on

ಕಾಗವಾಡ: ಮಣ್ಣು ತುಳಿಯುತ್ತ ಭಕ್ತಿಯಲ್ಲಿ ಲೀನನಾದ ಶಿವಶರಣ ಕುಂಬಾರ ಗುಂಡಯ್ಯನನ್ನು ಕಂಡ ಶಿವ ಕೈಲಾಸದಲ್ಲಿ ಕುಣಿಯಲಾರಂಭಿಸಿದ್ದರು. ಅಂತಹ ಮಹಾನ ವ್ಯಕ್ತಿಯ ವಂಶಸ್ಥರಾದ ಕುಂಬಾರರು ಜೇನು ನೋಣಗಳಂತೆ ಒಗ್ಗಟ್ಟಾಗಿ ಸಮುದಾಯದ ಏಳಿಗೆಗೆ ಶ್ರಮಿಸಬೇಕು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಶ್ರೀ ಹೇಳಿದರು.

ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಶ್ರೀ ಭಕ್ತ ಕುಂಬಾರ ಪಟ್ಟಣ ಪತ್ತಿನ ಸಹಕಾರಿ ಸಂಘ, ತಾಲೂಕು ಕುಂಬಾರರ ಸಮಾಜ ಸೇವಾ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಶಿವಶರಣ ಕುಂಬಾರ ಗುಂಡಯ್ಯನವರ ೧೪ನೇ ಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬೆಳಗ್ಗೆ ೮ ಗಂಟೆಗೆ ಸುಮಂಗಲೆಯರಿಂದ ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ, ವಾದ್ಯವೃಂದದೊಂದಿಗೆ ನದಿಯಿಂದ ಕುಂಭಹೊತ್ತು ಮೆರವಣಿಗೆಯ ಮೂಲಕ ಮಹಾದೇವ ಮಂದಿರಕ್ಕೆ ಆಗಮಿಸಿ, ಶಿವಲಿಂಗಕ್ಕೆ ಜಲಾಭಿಷೇಕ ಮಾಡಲಾಯಿತು. ಬಳಿಕ ಶಿವಶರಣ ಗುಂಡಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಮುಖಂಡರು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ತೆಲಸಂಗದ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಗುರುಪಾದ ಕುಂಬಾರ, ಸುಭಾಷ ಕುಂಬಾರ, ಅಣ್ಣಾಸಾಹೇಬ ಕುಂಬಾರ, ಸದಾಶಿವ ಕುಂಬಾರ, ಬಾಬಾಸಾಹೇಬ ಕುಂಬಾರ, ಡಾ. ಆನಂದ ಕುಂಬಾರ, ವಿರುಪಾಕ್ಷಿ ಕುಂಬಾರ, ಯೋಗೇಶ ಕುಂಬಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net