ಸಮುದಾಯದ ಅಭಿವೃದ್ಧಿಗೆ ಕ್ರಮ: ಶಾಸಕ ಜಿ.ಬಿ.ಜೋತಿಗಣೇಶ್

13TMK_UPPARA
Published on

ತುಮಕೂರು: ಸಣ್ಣಸಣ್ಣ ಸಮುದಾಯಗಳು ತಮ್ಮಗೆ ಸಿಗುವ ಸಣ್ಣಪುಟ್ಟ ಅವಕಾಶಗಳನ್ನೇ ಸದುಪಯೋಗಪಡಿಸಿಕೊಂಡು ಅರ್ಥಿಕ, ಸಾವಾಜಿಕ, ಶೈಕ್ಷಣಿಕ ಎಳ್ಗೆಗೆ ಬಳಸಿಕೊಳ್ಳಬೇಕು ಎಂದು ಶಾಸಕ ಜಿ.ಬಿ.ಜೋತಿಗಣೇಶ್ ಹೇಳಿದರು.

ನಗರದ ಶ್ರೀರಾಮ ನಗರದಲ್ಲಿರುವ ಉಪ್ಪಾರ ವಿದ್ಯಾಭಿವೃದ್ಧಿ ಸಂದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ವಾತನಾಡಿದ ಅವರು, ಸಣ್ಣ ಸಮುದಾಯಗಳು ನೇರವಾಗಿ ಚುನಾವಣೆಯಲ್ಲಿ ಸ್ಪರ್ಧೆ ವಾಡಿ ಗೆಲುವು ಪಡೆಯುವುದು ಇಂದಿನ ದಿನಗಳಲ್ಲಿ ದುಸ್ತರವಾಗಿದೆ ಎಂದರು.

ಬಿಜೆಪಿ ಸಣ್ಣಪುಟ್ಟ ಸಮುದಾಯಗಳ ಮುಖಂಡರನ್ನು ಗುರುತಿಸಿ, ಅವರನ್ನು ನಿಗಮ ಮಂಡಳಿಗಳಿಗೆ, ಸ್ಥಳೀಯ ಸಂಸ್ಥೆಗಳಿಗೆ ನಾಮನಿರ್ದೇಶನ ವಾಡಲಾಗುತ್ತಿದೆ. ಇಂತಹ ಅವಕಾಶಗಳನ್ನು ಸಮುದಾಯದ ಬೆಳವಣಿಗೆಗೆ ಬಳಸುವುದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಜಿಲ್ಲಾ ಉಪ್ಪಾರ ಸಂದ ಅಧ್ಯಕ್ಷ ದೊಡ್ಡನರಸಯ್ಯ ವಾತನಾಡಿ, ಸಂಸದ ಜಿ.ಎಸ್.ಬಸವರಾಜು ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಿಂದ ಸಾಕಷ್ಟು ಅನುದಾನವನ್ನು ಅಮರಜೋತಿ ನಗರ ಹಾಗೂ ಇನ್ನಿತರ ಕಡೆಗಳಲ್ಲಿ ನಡೆಯುವ ಸಮುದಾಯದ ಅಭಿವೃದ್ಧಿ ಕಾಮಗಾರಿಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಉಪ್ಪಾರ ವಿದ್ಯಾಭಿವೃದ್ಧಿ ಸಂದ ಶ್ರೀನಿವಾಸ ವಾತನಾಡಿ, ಸಮುದಾಯವನ್ನು ನಗರ ಶಾಸಕರು ಗುರುತಿಸಿದ್ದಾರೆ. ಅದೇ ರೀತಿ ಸಂಸದರು ಮುಂಬರುವ ಜಿಪಂ, ತಾಪಂ ಚುನಾವಣೆಗಳಲ್ಲಿ ಅವಕಾಶ ಇರುವ ಕಡೆ ಉಪ್ಪಾರ ಸಮುದಾಯದ ಯುವಕರಿಗೆ ಸ್ಪರ್ಧಿಸಲು ಬಿಜೆಪಿಯಿಂದ ಟಿಕೇಟ್ ದೊರಕಿಸಿ ಕೊಡುವಂತೆ ಮನವಿ ವಾಡಿದರು.ನಗರ ಪಾಲಿಕೆ ನಾಮನಿರ್ದೇಶಿತ ಸದಸ್ಯ ತ್ಯಾಗರಾಜಸ್ವಾಮಿ, ಮುಖಂಡರಾದ ಮಂಜುನಾಥ್,ಚನ್ನಿಗರಾಯಪ್ಪ, ಸಂಜೀವಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net