ಸಮುದಾಯ ಸಂಘಟಿತವಾದಲ್ಲಿ ಸೌಲಭ್ಯ ಸದ್ಬಳಕೆ

26 KAMPLI 02
Published on

ಕಂಪ್ಲಿ: ಉನ್ನತ ಶಿಕ್ಷಣ ಮತ್ತು ಹುದ್ದೆ ಪಡೆಯುವ ಬಗ್ಗೆ ಸಮುದಾಯದ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸಿ.ಶಿವಕುಮಾರ್ ಹೇಳಿದರು.

ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ಸಂಘಟನಾ ಸಭೆಯ ಅಧ್ಯಕ್ಷತೆ ವಹಿಸಿ ಭಾನುವಾರ ಮಾತನಾಡಿದರು. ಛಲವಾದಿ ಸಮುದಾಯದವರು ರಾಜಕೀಯ ಪ್ರಾತಿನಿಧ್ಯ ಪಡೆದು ಸಮುದಾಯದ ಬೆಳವಣಿಗೆಗೆ ಶ್ರಮಿಸಬೇಕು. ಸಮುದಾಯ ಸಂಘಟಿತವಾದಲ್ಲಿ ಸರ್ಕಾರದ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಲು ಸಾಧ್ಯ ಎಂದರು.

ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಸಿ.ಎ.ಚನ್ನಪ್ಪ ಮಾತನಾಡಿ, ತಾಲೂಕಿನಲ್ಲಿ ಛಲವಾದಿ ಸಮುದಾಯವನ್ನು ಸಂಘಟಿಸೋಣ ಎಂದು ಹೇಳಿದರು. ಪ್ರಮುಖರಾದ ಎಂ.ಸಿ.ಮಾಯಪ್ಪ, ಬೆಳ್ಳಕ್ಕಿ ಹುಸೇನಪ್ಪ, ಆರ್.ಚನ್ನಬಸವ, ಲಕ್ಷ್ಮಣ ಮಾವಿನಹಳ್ಳಿ, ಬಿ.ಗೋನಾಳ್ ಮಲ್ಲಿಕಾರ್ಜುನ, ಶೇಖಣ್ಣ, ಕುರುವಳ್ಳಿ ಶೇಖರ್, ದಲಿತ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ಸಿ.ಹನುಮೇಶ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಂಕರ್, ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್, ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ರಮೇಶ್, ಜಿಲ್ಲಾ ಕೋಶಾಧ್ಯಕ್ಷ ವೆಂಕಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net