ಸಮುದಾಯ ಭವನಗಳ ಸದ್ಭಳಕೆ ಮಾಡಿಕೊಳ್ಳಿ

27rajesh4
Published on

ಚಾಮರಾಜನಗರ: ಸಮುದಾಯ ಭವನಗಳು ಸದಾ ಚಟುವಟಿಕೆಯಿಂದ ಕೂಡಿರಬೇಕು ಆಗಾದಾಗ ಮಾತ್ರ ಭವನಗಳ ನಿರ್ಮಾಣಕ್ಕೆ ಅರ್ಥ ಬರುತ್ತದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು.

ತಾಲೂಕಿನ ದೊಡ್ಡರಾಯ ಪೇಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀನೇಕಾರ ದೇವಾಂಗ ಸಮುದಾಯ ಭವನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಸಮುದಾಯ ಭವನ ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಭವನವನ್ನು ದೇವಾಲಯದಂತೆ ಶ್ರದ್ದೆ-ಭಕ್ತಿಯಿಂದ ನಿರ್ವಹಣೆ ಮಾಡಬೇಕು. ಸದಾ ಕ್ರಿಯಾಶೀಲವಾಗಿ ಭವನದಲ್ಲಿ ಚರ್ಚೆ,ಶೈಕ್ಷಣಿಕ ಸಭೆ-ಸಮಾರಂಭ ಸೇರಿದಂತೆ ಉತ್ತಮ ಚಟುವಟಿಕೆಗಳನ್ನು ರೂಪಿಸಬೇಕು ಎಂದರು.

ಗ್ರಾಮದ ಜನತೆಗೆ ಮೂಲ ಸೌಕರ್ಯಕ್ಕೆ ಅಗತ್ಯವಾದ ರಸ್ತೆ, ಚರಂಡಿ, ಕುಡಿಯುವ ನೀರು, ವಸತಿ ಸೇರಿದಂತೆ ಸಮುದಾಯಭವನಗಳನ್ನು ಸಮಾಜಿಕ ನ್ಯಾಯದಡಿ ಪ್ರತಿಯೊಂದು ಸಮುದಾಯಕ್ಕೂ ತಲುಪುವಂತೆ ಮುತುವರ್ಜಿವಹಿಸಬೇಕು. ಇನ್ನು ಅಗತ್ಯ ವಿರುವಡೆ ಮತ್ತಷ್ಟು ಅಭಿವೃದ್ದಿ ಪಡಿಸುವುದಾಗಿ ಭರವಸೆ ನೀಡಿದರು.

ಇದೇ ವೇಳೆ ದೇವಾಂಗ ಸಮುದಾಯದ ಬಡಾವಣೆಯಲ್ಲಿ ಏರ್ಪಡಿಸಿದ್ದ ಶ್ರೀರಾಮಲಿಂಗ, ಶ್ರೀಚೌಡೇಶ್ವರಿ ದೇವಸ್ಥಾನದಲ್ಲಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಕುಂಭಾಭಿಷೇಕ ಬಳಿಕ ಬೆಳ್ಳಿಕವಚ, ವಸ್ತ್ರ ಹೂವಿನ ಅಲಂಕಾರ, ಸಂಕಲ್ಪ ಕುಂಕುಮಾರ್ಚನೆ, ವಿಶೇಷ ಪೂಜೆ ನೆರವೇರಿಲಾಯಿತು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.ಇದೇ ವೇಳೆ ಶಾಸಕರು ದೇವಸ್ಥಾನಕ್ಕ ಬೇಟೆ ನೀಡಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ಮಹೇಶ್ವರಿ, ನಾಗೇಂದ್ರ, ಸಿದ್ದರಾಜು, ವಿಜಯ್, ಮುಖಂಡರಾದ ಪಿ.ರಂಗಪ್ಪ, ಗೌಡಿಕೆ ಶಿವಸ್ವಾಮಪ್ಪ, ರವಿಗೌಡ, ವೆಂಕಟೇಶ್, ಆರ್ಚಕ ರಂಗಪ್ಪ, ಮಹದೇವ್, ಅಶೋಕ್, ಮಹದೇವಸ್ವಾಮಿ, ರಾಜು ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net