ಸಮುದಾಯ ಭವನ ನಿರ್ಮಿಸಿಕೊಡುವಂತೆ ಮನವಿ

05 HANUR 3
Published on


ಚಾಮರಾಜನಗರ : ಸಮುದಾಯ ಭವನ ನಿರ್ಮಿಸಿಕೊಡುವಂತೆ ಶನಿವಾರ ಜೆಡಿಎಸ್ ಕಚೇರಿಯಲ್ಲಿ ಮಡಿವಾಳ ಸಮುದಾಯದವರು ಶಾಸಕ ಎಂ.ಆರ್.ಮಂಜುನಾಥ್ ಅವರಲ್ಲಿ ಮನವಿ ಸಲ್ಲಿಸಿದರು.


ತಾಲೂಕು ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ತಾಲೂಕಿನಲ್ಲಿ ಮಡಿವಾಳ ಸಮುದಾಯ ತೀರಾ ಹಿಂದುಳಿದಿದೆ. ಮದುವೆ, ಶುಭ ಕಾರ್ಯ ಹಾಗೂ ಸಭೆಗಳನ್ನು ನಡೆಸಲು ಭವನವಿಲ್ಲ. ಇರುವ ನಿವೇಶನದಲ್ಲಿ ಭವನ ನಿರ್ಮಿಸಿಕೊಳ್ಳಲು ಅನುದಾನ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು. ಶಾಸಕರು ಪ್ರತಿಕ್ರಿಯಿಸಿ ಭವನ ನಿರ್ಮಾಣಕ್ಕೆ ಕ್ರಮವಹಿಸುವ ಭರವಸೆ ನೀಡಿದರು. ಇದೇ ಸಂದರ್ಭ ಶಾಸಕರನ್ನು ಸನ್ಮಾನಿಸಲಾಯಿತು. ಮಡಿವಾಳ ಸಂಘದ ಕಾರ್ಯದರ್ಶಿ ಕೃಷ್ಣ, ಮುಖಂಡರಾದ ಮೋಹನ್, ರುದ್ರಶಕ್ತಿ, ರಮೇಶ್, ನಂದೀಶ್, ಸಿದ್ದರಾಜು, ಮಹದೇವಶೆಟ್ಟಿ, ಶಾಂತರಾಜು, ಗೋವಿಂದರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net