ಸಮುದಾಯ ಭವನ ನಿರ್ಮಿಸಿ; ಸಿಂಪಿ ಬಣಗಾರ ಸಮಾಜದ ತಾಲೂಕು ಅಧ್ಯಕ್ಷ ಕಾರೇಮಂಗಿ ತಿಪ್ಪೇಸ್ವಾಮಿ ಒತ್ತಾಯ

21082022 kampli news
Published on

ಕಂಪ್ಲಿ: ಕೋಟೆಯ ಹೊಳೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಭಾನುವಾರ ಸಿಂಪಿ ಬಣಗಾರ ಸಮಾಜದ ಜಾಗೃತಿ ಸಮಾರಂಭ ಜರುಗಿತು.

ಸಿಂಪಿ ಬಣಗಾರ ಸಮಾಜದ ತಾಲೂಕು ಅಧ್ಯಕ್ಷ ಕಾರೇಮಂಗಿ ತಿಪ್ಪೇಸ್ವಾಮಿ ಮಾತನಾಡಿ, ಸಿಂಪಿ ಬಣಗಾರ ಸಮಾಜದ ಧಾರ್ಮಿಕ, ಆಧ್ಯಾತ್ಮಿಕ ಚಟುವಟಿಕೆಗಳಿಗಾಗಿ ಸಮುದಾಯ ಭವನ ನಿರ್ಮಿಸಲು ನಿವೇಶನ ಮತ್ತು ಅನುದಾನ ನೀಡುವಲ್ಲಿ ಪುರಸಭಾಡಳಿತ, ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.

ಕೋಟೆಯ ಜಡೇಶಂಕರಲಿಂಗ ದೇವರಿಗೆ ಮಹಾರುದ್ರಾಭಿಷೇಕ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಪ್ರಮುಖರಾದ ಅಂಗಡಿ ಮಲ್ಲಿಕಾರ್ಜುನ, ಮುದ್ದಟನೂರು ಶಿವಲಿಂಗಪ್ಪ, ಕುರುಗೋಡು ಆಲೂರು ಈರಣ್ಣ, ಸಿ.ಎನ್.ನಾಗರಾಜ ಸೇರಿ ರಾಮಸಾಗರ, ಶಿರಗೇರಿ, ಮುದ್ದಟನೂರು ಇತರರು ಇದ್ದರು. ಎಮ್ಮಿಗನೂರು, ಸಣಾಪುರ, ಕುರುಗೋಡು, ರಾಮಸಾಗರ, ಬುಕ್ಕಸಾಗರ, ಕಮಲಾಪುರಗಳಿಂದ ಸಿಂಪಿ ಬಣಗಾರ ಸಮುದಾಯದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net