ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗಲಿ; ನೇಕಾರ ಸ್ವಕುಳಸಾಳಿ ಸಮಾಜದ ತಾಲೂಕು ಅಧ್ಯಕ್ಷ ಮಳೆಕಾರ ಅಂಜಿನಪ್ಪ ಒತ್ತಾಯ

21082022 Kampli swakuli samaja
Published on

ಕಂಪ್ಲಿ: ನೇಕಾರ ಸ್ವಕುಳಸಾಳಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರು ಕೈಜೋಡಿಸಬೇಕು ಎಂದು ಸಮಾಜದ ನಗರ ಅಧ್ಯಕ್ಷ ಮಳೆಕಾರ ಅಂಜಿನಪ್ಪ ಹೇಳಿದರು.

ಇಲ್ಲಿನ ಬಣ್ಣದ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸ್ವಕುಳಸಾಳಿ ಸಮಾಜದ ಕುಲಮಹರ್ಷಿ ಜೀವ್ಹೇಶ್ವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಟ್ಟಣದ ರಸ್ತೆ, ವೃತ್ತಕ್ಕೆ ಜೀವ್ಹೇಶ್ವರ ಮಹರ್ಷಿಯ ಹೆಸರನ್ನು ಇಡುವ ಮೂಲಕ ಸಮಾಜವನ್ನು ಗುರುತಿಸವಲ್ಲಿ ಪುರಸಭಾಡಳಿತ ಜಾಗೃತಿ ತೋರಬೇಕು. ಸಮಾಜದ ಚಟುವಟಿಕೆಗಳಿಗೆ ಸಮುದಾಯ ಭವನ ನಿರ್ಮಾಣ ಅಗತ್ಯವಿದೆ ಎಂದರು.

ನೇಕಾರ ಸಮುದಾಯಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಪಿ.ಬ್ರಹ್ಮಯ್ಯ, ಕಾರ್ಯದರ್ಶಿ ಜಿ.ಸುಧಾಕರ, ದೇವಾಂಗ ಸಮಾಜದ ಅಧ್ಯಕ್ಷ ಗದ್ಗಿ ವಿರುಪಾಕ್ಷಿ, ಕಂದಾಯ ಇಲಾಖೆ ಸಿಬ್ಬಂದಿ ವಿಜಯಲಕ್ಷ್ಮೀ, ರಂಗಭೂಮಿ ಕಲಾವಿದ ಬೂದಗುಂಪಿ ಹುಸೇನ್‌ಸಾಬ್ ಅವರನ್ನು ಗೌರವಿಸಲಾಯಿತು.

ಮೆರವಣಿಗೆ: ತುಂಗಭದ್ರಾ ನದಿ ತೀರದಿಂದ ಜೀವ್ಹೇಶ್ವರ ಭಾವಚಿತ್ರ ಮೆರವಣಿಗೆ ಜರುಗಿತು. ಪೂರ್ಣಕುಂಭ, ಕಳಸದಾರತಿ, ಮಂಗಳವಾದ್ಯಗಳು ಪಾಲ್ಗೊಂಡಿದ್ದವು. ಸಮಾಜದ ಪ್ರಮುಖರಾದ ಏಕಬೋಟೆ ತಿಪ್ಪಣ್ಣ, ಮಳೆಕಾರ್ ಭರತ್‌ಕುಮಾರ್, ಮಳೆಕಾರ ಲಕ್ಷ್ಮಣ, ಸಾಗರ ಶ್ರೀಖಂಡೆ, ಪ್ರಕಾಶ್ ಶ್ರೀಖಂಡೆ, ಗುರುರಾಜ ಸರೋಧೆ, ಮಲ್ಲಿಕಾರ್ಜುನ ಸರೋಧೆ, ಜಿರಾಳ್ ಶಿವಕುಮಾರ್, ರಾಘವೇಂದ್ರ, ಅನಿಲ್, ಕುಸುಮ, ರುಕ್ಮಿಣಿ, ಸುಭದ್ರಾ, ಸುಮಂಗಳಾ, ಲತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net