ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ

16 (2)
Published on

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಶಿವಾರ್ಚಕರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಜಿ.ಟಿ.ದೇವೇಗೌಡ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ಭವನ ನಿರ್ಮಾಣಕ್ಕೆ ಒಟ್ಟು 40 ಲಕ್ಷ ರೂ. ಅಂದಾಜು ವೆಚ್ಚದ ಕ್ರಿಯಾಯೋಜನೆ ತಯಾರಾಗಿದೆ. ಮೊದಲ ಹಂತದಲ್ಲಿ 12 ಲಕ್ಷ ರೂ. ನೀಡಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು ಹಂತ ಹಂತವಾಗಿ ಶಾಸಕರ ಕ್ಷೇಮಾಭಿವೃದ್ಧಿ ನಿಧಿಯಿಂದ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ನಂತರ ಚಾಮುಂಡಿಬೆಟ್ಟದ ನಾಯಕರ ಬೀದಿಗೆ ಭೇಟಿ ನೀಡಿದ ಶಾಸಕರು, ಆರು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ರಸ್ತೆ ಹಾಳಾಗಿದ್ದು, ಇದನ್ನು ಮರು ನಿರ್ಮಿಸಲು 50 ಲಕ್ಷ ರೂ. ಅನುದಾನ ಕೊಡಿಸುವುದಾಗಿ ಶಾಸಕರು ತಿಳಿಸಿದರು.
ಜಿಪಂ ಸದಸ್ಯ ಮಾದೇಗೌಡ, ತಾಪಂ ಸದಸ್ಯ ಯೋಗಶ್ರೀನಿವಾಸ್, ಮುಖಂಡರಾದ ಶ್ರೀಧರ್, ಮಂಜು, ನಾಗರಾಜು, ಮಣಿಗಾರ್‌ಪ್ರಸಾಸ್, ರಮೇಶ್, ಮಂಜುನಾಥ್, ನಾಗೇಂದ್ರ ಮಹದೇವಸ್ವಾಮಿ, ದಿನೇಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net