

ಹರಪನಹಳ್ಳಿ: ಬೇಲೂರು, ಹಳೇಬಿಡು, ಹಂಪಿ ಸೇರಿದಂತೆ ಇತರೆ ಐತಿಹಾಸಿಕ ಶಿಲ್ಪಕಲೆಗಳ ನಿರ್ಮಾಣಕ್ಕೆ ವಿಶ್ವಕರ್ಮ ಸಮುದಾಯ ಪ್ರಸಿದ್ಧಿ ಪಡೆದಿದೆೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಭಾನುವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಂದು ಕಾರ್ಯಗಳಲ್ಲಿ ವಿಶ್ವಕರ್ಮರ ಅಗತ್ಯವಿದೆ. ಸಮುದಾಯದವರಿಗೆ ಉತ್ತಮ ಶಿಕ್ಷಣವನ್ನು ನೀಡಿದಾಗ ಮಾತ್ರ ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಪಾಲಕರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಸರ್ಕಾರಿ ಜಾಗವಿದ್ದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಪ್ರಾಚಾರ್ಯ ಅರುಣ್‌ಕುಮಾರ ಮಾತನಾಡಿ, ವಿಶ್ವಕರ್ಮ ಎನ್ನುವುದು ಯಾವುದೇ ಧರ್ಮ, ಜಾತಿಯಲ್ಲ ಬದಲಾಗಿ ಸಂಸ್ಕೃತಿಯನ್ನು ಜಗತ್ತಿನಲ್ಲಿ ಅನಾವರಣಗೊಳಿಸಿದ ಸಮುದಾಯವಾಗಿದೆ ಎಂದರು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.
ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ತಹಸೀಲ್ದಾರ್ ಗಿರೀಶಬಾಬು, ತಾಪಂ ಇಒ ಕೆ.ಆರ್.ಪ್ರಕಾಶ್, ಪುರಸಭೆ ಸದಸ್ಯರಾದ ಎಂ.ವಿ.ಅಂಜಿನಪ್ಪ, ಟಿ.ವೆಂಕಟೇಶ್, ಅಬ್ದುಲ್ ರೇಹಮಾನಸಾಬ್, ಗೊಂಗಡಿ ನಾಗರಾಜ, ಚಿಕ್ಕೇರಿ ಬಸಪ್ಪ, ತಾಪಂ ಮಾಜಿ ಸದಸ್ಯರಾದ ಹುಲಿಕಟ್ಟಿ ಚಂದ್ರಪ್ಪ, ಓ.ರಾಮಪ್ಪ, ಪ್ರಮುಖರಾದ ಜಯಲಕ್ಷ್ಮೀ, ರಂಗಪ್ಪ, ಮೌನೇಶ್,ಕಲ್ಲಹಳ್ಳಿ ಗೋಣೆಪ್ಪ , ಕಾಳಚಾರಿ, ಉಮಾ ಮಹೇಶ್ವರ, ನಟರಾಜ, ಅಜ್ಜಯ್ಯ ಇದ್ದರು.