ಸಮುದಾಯ ಒಗ್ಗೂಡಿದರೆ ಕ್ಷಯ ಮುಕ್ತ ಸಾಧ್ಯ

oplus_1024
oplus_1024
Published on

ಚಿತ್ರದುರ್ಗ: ಭಾರತ ಕ್ಷಯರೋಗ ಮುಕ್ತ ದೇಶವಾಗಲು ಸಮುದಾಯ ಒಗ್ಗೂಡಿ ಕೆಲಸ ಮಾಡಬೇಕು ಎಂದು ಟಿಎಚ್‌ಒ ಡಾ.ಬಿ.ವಿ.ಗಿರೀಶ್ ಸಲಹೆ ನೀಡಿದರು.

ಆರೋಗ್ಯ ಇಲಾಖೆಯಿಂದ ತಾಲೂಕಿನ ಚಿಕ್ಕಗೊಂಡನಹಳ್ಳಿ ಪಿಎಚ್‌ಸಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕ್ಷಯ ಮುಕ್ತ ನೂರು ದಿನಗಳ ಅಭಿಯಾನದಲ್ಲಿ ಮಾತನಾಡಿದರು.

ಕ್ಷಯ ದೇಶದ ಅತಿ ದೊಡ್ಡ ತೊಂದರೆಗಳಲ್ಲೊಂದಾದ ರೋಗ. ಅಲ್ಲದೆ, ಪ್ರತಿ ವರ್ಷ ವಿಶ್ವದಲ್ಲೇ ಅತಿ ಹೆಚ್ಚು ಜನ ಇದಕ್ಕೆ ತುತ್ತಾಗುತ್ತಿದ್ದಾರೆ. ಆದ್ದರಿಂದ ನವಜಾತ ಶಿಶುಗಳಿಗೆ ಬಿಸಿಜಿ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕು. ಅಲ್ಲದೆ, ರೋಗ ನಿಯಂತ್ರಣಕ್ಕೆ ಸಾರ್ವಜನಿಕರು ಕಾಳಜಿಯೊಂದಿಗೆ ಎಚ್ಚರವಹಿಸಬೇಕು ಎಂದು ಮನವಿ ಮಾಡಿದರು.

ಟಿಎಚ್‌ಇಒ ಎನ್.ಎಸ್.ಮಂಜುನಾಥ್ ಮಾತನಾಡಿ, ಮನೆಯ ಸುತ್ತಮುತ್ತಲು ಟಿಬಿ ರೋಗ ಲಕ್ಷಣ ಉಳ್ಳವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡಿ. ರೋಗ ಬಹುಬೇಗ ಪತ್ತೆ ಹಚ್ಚಿ, ಪೌಷ್ಟಿಕ ಆಹಾರ ಸೇವನೆ, ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಗುಣಪಡಿಸಲು ಸಾಧ್ಯವಿದೆ ಎಂದು ಸಲಹೆ ನೀಡಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಪಿಎಚ್‌ಸಿ ವೈದ್ಯಾಧಿಕಾರಿ ಡಾ.ಸಚಿನ್, ನಿರೀಕ್ಷಣಾಧಿಕಾರಿಗಳಾದ ಶಂಕರ್‌ನಾಯಕ್, ಪ್ರವೀಣ್‌ಕುಮಾರ್, ಸಮುದಾಯ ಆರೋಗ್ಯ ಅಧಿಕಾರಿ ಲೋಹಿತ್‌ಕುಮಾರ್, ಪ್ರಯೋಗ ಶಾಲಾ ತಂತ್ರಜ್ಞ ನಾಗರಾಜ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಸುಧಾ, ಪ್ರಿಯಾಂಕಾ, ಕೆ.ಟಿ.ದೇವೇಂದ್ರ ಇತರರಿದ್ದರು.

===

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net