ಚಾಮರಾಜನಗರ: ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸುತ್ತಿರುವ ಜಾತಿಗಣತಿ ಸಮೀಕ್ಷೆಯಲ್ಲಿ ಶಿವಾರ್ಚಕ ಸಮುದಾಯದವರು ಜಾತಿ ಕಾಲಂನಲ್ಲಿ ಶಿವಾರ್ಚಕ ಎಂದು ಬರೆಸುವಂತೆ ಎಂದು ಕರ್ನಾಟಕ ರಾಜ್ಯ ಶಿವಾರ್ಚಕ ಸಂಘದ ಯಡಿಯೂರು ವಿನಯ್ ದೀಕ್ಷಿತ್ ಮನವಿ ಮಾಡಿದರು.
ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿ ಸಮೀಕ್ಷೆಯಲ್ಲಿ ಶಿವಾರ್ಚಕ ಸಮುದಾಯದವರು ಪಾಲ್ಗೊಂಡು ಕ್ರಮಸಂಖ್ಯೆ ಎ-1320 ರ ಜಾತಿ ಕಾಲಂ ನಲ್ಲಿ ಶಿವಾರ್ಚಕ, ಧರ್ಮದ ಕಾಲಂನಲ್ಲಿ ಹಿಂದೂ ಧರ್ಮ, ಉಪಜಾತಿ ಇಲ್ಲ ಎಂದು ಬರೆಯಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗೋಷ್ಠಿಯಲ್ಲಿ ಶಿವಾರ್ಚಕ ಸಂಘದ ರಾಜ್ಯ ನಿರ್ದೇಶಕ ಸಚಿನ್ ಕೆರಹಳ್ಳಿ, ಸೋಮಶೇಖರ್ ಹಾಜರಿದ್ದರು.