

ಕೊಳ್ಳೇಗಾಲ: ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ಜಾರಿ ನಿಟ್ಟಿನಲ್ಲಿ ಪರಿಶಿಷ್ಟ ಜಾತಿಗಳ ಸಮೀಕ್ಷೆ ಆರಂಭ ಗೊಂಡಿದ್ದು. ಸಮೀಕ್ಷೆಯ ಎರಡನೇ ದಿನವಾದ ಮಂಗಳವಾರ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಸರ್ವರ್ ಸಮಸ್ಯೆಯಿಂದ ಗಣತಿಗೆ ತೊಡಕಾಗಿದೆ.
ಸಮೀಕ್ಷೆದಾರರು ಮುಳ್ಳೂರು ಗ್ರಾಮದಲ್ಲಿ ಬೆಳಗ್ಗೆ 9 ಗಂಟೆಯಲ್ಲಿ ಸಮೀಕ್ಷೆ ಆರಂಭಿಸಿದ್ದು, ಆರಂಭದಲ್ಲಿ ಗ್ರಾಮದ ಪರಿಶಿಷ್ಟ ಜಾತಿಯ ಆದಿಜಾಂಬವ ಜನಾಂಗಕ್ಕೆ ಸೇರಿದ 1 ಕುಟುಂಬದ ನೋಂದಣಿ ಮಾತ್ರ ಆಗಿದೆ. ನಂತರ ಕಾಡಿದ ಸರ್ವರ್ ಸಮಸ್ಯೆಯಿಂದ ಮಧ್ಯಾಹ್ನ 2 ಗಂಟೆವರೆಗೂ ನೋಂದಣಿ ಮಾಡಲು ಸಾಧ್ಯವಾಗಿಲ್ಲ. ಮನೆ ಮನೆಗೆ ತೆರಳಿದ ಸಮೀಕ್ಷಾದಾರರು ನೋಂದಣಿ ಪ್ರಕ್ರಿಯೆ ಮಾಡಿದರೂ ಸರ್ವರ್ ಸಿಗದ ಕಾರಣ ಅಪ್‌ಲೌಡ್ ಆಗದೆ ಪರದಾಡುವ ಪರಿಸ್ಥಿತಿ ಕಂಡು ಬಂತು.
ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಸರ್ವರ್ ಸಮಸ್ಯೆಯಿಂದ ನೋಂದಣಿಗೆ ತೊಡಕಾಗಿರುವ ಮಾಹಿತಿ ತಿಳಿದಿದೆ. ಇದನ್ನು ಬಿಟ್ಟರೆ ಬೇರೆ ಯಾವುದೇ ಗ್ರಾಮದಿಂದ ಸರ್ವರ್ ಸಮಸ್ಯೆ ಆಗಿರುವ ದೂರು ಕೇಳಿ ಬಂದಿಲ್ಲ. ಏಕಕಾಲದಲ್ಲಿ ಪ್ರಕ್ರಿಯೆ ನಡೆಯುತ್ತಿರುವುದರಿಂದ ಈ ರೀತಿ ಆಗಿರಬಹುದು. ಇದನ್ನು ಪರಿಶೀಲಿಸಲಾಗುವುದು. ಕೇಶವಮೂರ್ತಿ, ಸಹಾಯಕ ನಿರ್ದೇಶಕ , ಸಮಾಜ ಕಲ್ಯಾಣ ಇಲಾಖೆ.