ಸಮಾವೇಶದ ಪ್ರಮುಖ ಹಕ್ಕೊತ್ತಾಯಗಳು

Shoshitha
Published on

ಚಿತ್ರದುರ್ಗ: ರಾಜ್ಯಮಟ್ಟದ ಶೋಷಿತರ ಜಾಗೃತಿ ಸಮಾವೇಶಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಂಘಟಕ ಬಿ.ಟಿ.ಜಗದೀಶ್ ಗುರುವಾರ ಮಾಹಿತಿ ನೀಡಿದರು.

ಕಾಂತರಾಜು ಆಯೋಗದ ವರದಿ ರಾಜ್ಯ ಸರ್ಕಾರ ಕೂಡಲೇ ಸ್ವೀಕರಿಸಿ, ಯಥಾವತ್ತಾಗಿ ಅಂಗೀಕರಿಸಿ, ಜಾರಿಗೊಳಿಸಬೇಕು. ಕೇಂದ್ರ ಸರ್ಕಾರ ಜಾತಿವಾರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡಿಸಬೇಕು. ಮಹಿಳಾ ರಾಜಕೀಯ ಮೀಸಲಾತಿ ಕಾಯ್ದೆ ಕೂಡಲೇ ಜಾರಿಗೊಳಿಸಬೇಕು. ರಾಜಕೀಯ ಕ್ಷೇತ್ರದಲ್ಲೂ ಒಳಮೀಸಲಾತಿ ಕಲ್ಪಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಶೇಕಡವಾರು ಪ್ರಮಾಣದಲ್ಲಿ ಖಾಸಗಿ ಕ್ಷೇತ್ರಕ್ಕೂ ಮೀಸಲಾತಿ ವಿಸ್ತರಿಸಬೇಕು. ಇವು ನಮ್ಮ ಪ್ರಮುಖ ಹಕ್ಕೊತ್ತಾಯವಾಗಿವೆ ಎಂದರು.

ಲಕ್ಷಾಂತರ ಮಂದಿಗೆ ಚಿಕ್ಕನ್ ಬಿರಿಯಾನಿ, 50 ಸಾವಿರ ಜನರಿಗೆ ಸಸ್ಯಹಾರಿ ಊಟ ಇರಲಿದೆ. ಇದಕ್ಕಾಗಿ 1 ಸಾವಿರ ಕೌಂಟರ್ ಮಾಡಲಾಗುವುದು. ಅರ್ಧ ಲೀಟರ್‌ನ ನೀರಿನ ಬಾಟಲಿ ಸೇರಿ ಹತ್ತಾರು ಟ್ಯಾಂಕರ್‌ಗಳು ಕೌಂಟರ್ ಬಳಿ ಇರಲಿವೆ. 150 ತಾತ್ಕಾಲಿಕ ಶೌಚಗೃಹ ನಿರ್ಮಾಣವಾಗಿವೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net