ಸಮಾನವಾಗಿ ಬಾಳುವ ಹಕ್ಕು ನೀಡಿದ ಅಂಬೇಡ್ಕರ್

23hunasgi1 dss kalldevanhalli
Published on

ಹುಣಸಗಿ: ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ದೇಶದಲ್ಲಿ ಎಲ್ಲರಿಗೂ ಸಮನಾಗಿ ಬಾಳುವ ಹಕ್ಕು ನೀಡಿದ್ದಾರೆ ಎಂದು ಜೇವರ್ಗಿ ಪದವಿ ಕಾಲೇಜು ಉಪನ್ಯಾಸಕ ಡಾ.ಕರಿಗೋಡೇಶ್ವರ ಹೇಳಿದರು.

ಕಲ್ಲದೇವನಹಳ್ಳಿಯಲ್ಲಿ ಡಾ.ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಉಪನ್ಯಾಸಕ ನೀಡಿದ ಅವರು, ಡಾ.ಅಂಬೇಡ್ಕರ್ ತಮ್ಮ ಶೈಕ್ಷಣಿಕ ಅವಧಿಯಲ್ಲಿ ಹಾಗೂ ಸಂವಿಧಾನ ರಚಿಸುವ ವೇಳೆ 58 ಸಾವಿರ ವಿವಿಧ ಸಮಾಜದ, ಜನಾಂಗೀಯ, ಬೇರೆ ದೇಶದ ಅನೇಕ ಸೈದ್ಧಾಂತಿಕ ಪುಸ್ತಕವನ್ನು ಅಧ್ಯಯನ ಮಾಡಿದ್ದರು. ಶೋಷಿತ ವರ್ಗದಲ್ಲಿ ಜನಿಸಿದರೂ ತಮ್ಮ ಸಂವಿಧಾನದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ಥಾನಮಾನ ಲಭಿಸುವಂತೆ ಸಂವಿಧಾನ ರಚನೆ ಮಾಡಿದ್ದಾರೆ ಎಂದರು.

ಶಾಸಕ ನರಸಿಂಹ ನಾಯಕ ಮಾತನಾಡಿ, ದಲಿತ ಸಂಘರ್ಷ ಸಮಿತಿ ಶಿಕ್ಷಣ, ಸಂಘಟನೆ, ಹೋರಾಟ ಈ ಮೂರು ಅಂಶಗಳನ್ನಿಟ್ಟುಕೊಂಡು ಬೆಳೆಯುತ್ತಾ ಬಂದಿದೆ. ಇಂದು ನಾವೆಲ್ಲರೂ ಅಂಬೇಡ್ಕರ್ ಅವರ ಚಿಂತನೆ ಮೈಗೂಡಿಸಿಕೊಂಡು ಸಮಾಜದ ಏಳಿಗೆಗೆ ಕಟ್ಟಿಬದ್ಧರಾಗಬೇಕು ಎಂದರು.

ಪ್ರಮುಖರಾದ ರಾಮಣ್ಣ ಕಲ್ಲದೇವನಹಳ್ಳಿ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್, ಎಚ್.ಸಿ.ಪಾಟೀಲ್, ನಾಗಣ್ಣ ಕಲದೇವನಹಳ್ಳಿ ಮಾತನಾಡಿದರು.

ಬಸವರಾಜಸ್ವಾಮಿ ಸ್ಥಾವರಮಠ, ವಿರೇಶ ಚಿಂಚೋಳಿ, ಬಿ.ಎಂ.ಹಳ್ಳಿಕೋಟೆ, ಯಲ್ಲಪ್ಪ ಕುರಕುಂದಿ, ಸಂಗಣ್ಣ ವೈಲಿ, ಚನ್ನಪ್ಪ ಚೆಟ್ಟಿ, ಪರಮಾನಂದ ಸಾಹು, ಭೀಮರಾಯ ದೊಡ್ಡಮನಿ, ಭೀಮನಗೌಡ ಬೈಲಾಪುರ, ಯಲ್ಲಪ್ಪ ದೊರೆ, ಶಿವಪ್ಪ, ಶಿವಲಿಂಗಪ್ಪ ರಾಜನಕೊಳೂರು, ಶರಣಪ್ಪ ಗುಳಬಾಳ ಇತರರಿದ್ದರು. ಜಯರಾಜ ಕಟ್ಟಿಮನಿ ಪ್ರತಿಜ್ಞಾ ವಿಧಿ ಬೋಧಿಸಿದರು. ಮೇಘಾ ಬಡಿಗೇರ ಪ್ರಾಥರ್ಿಸಿದರು. ಎಸ್.ಎಸ್. ಮಾರನಾಳ ನಿರೂಪಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net